ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟಿ.ದಾಸರಹಳ್ಳಿ: ಶಾಸಕರ ಅನುದಾನ ಬಿಡುಗಡೆಯಲ್ಲಿ ಸರಕಾರ ತಾರತಮ್ಯ; ದೇವೇಗೌಡ

ಬೆಂಗಳೂರು: ಟಿ.ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್ ಶಾಸಕ ಎಂಬ ಕಾರಣಕ್ಕೆ ದ್ವೇಷದ ರಾಜಕಾರಣ ಮಾಡುತ್ತಾ ಅನುದಾನ ಬಿಡುಗಡೆ ಮಾಡುವಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಸುಂಕದಕಟ್ಟೆ, ಹೆಗ್ಗನಹಳ್ಳಿ, ರಾಜಗೋಪಾಲನಗರ, ಪೀಣ್ಯ, ನೆಲಗದರನಹಳ್ಳಿ, ಚಿಕ್ಕಸಂದ್ರ, ಚಿಕ್ಕಬಾಣಾವರ, ಶಟ್ಟಿಹಳ್ಳಿಯಲ್ಲಿ ಪ್ರವಾಸ ಮಾಡಿ ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ದೇವೇಗೌಡರು ಮಾತನಾಡಿದರು. ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನರ ಅಹವಾಲು ಸ್ವೀಕರಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ಈ ಹಿಂದೆ ದೇವರಾಜ ಅರಸು, ಎಸ್.ಎಂ. ಕೃಷ್ಣ ಅವರ ಮನೆ ಮುಂದೆ ಧರಣಿ ಕೂತಿದ್ದೇನೆ. ಇದು ನನ್ನ ಸ್ವಭಾವ, ನಾನು ಹಳ್ಳಿ ರೈತನ ಮಗ. ಇದು ನನ್ನ ರಾಜಕೀಯ ಹೋರಾಟ, ನಾನು ಎಂದೂ ಹಿಂದೆ ಸರಿಯಲ್ಲ.‌ ದೇವೇಗೌಡರು ಮನೆಯಲ್ಲಿ ಮಲಗುತ್ತಾರೆ ಅನ್ನೋದು ಅವರ ಭಾವನೆ. ಆದರೆ, ದೇವೇಗೌಡ ಯಾವತ್ತೂ ಮನೆಯಲ್ಲಿ ಮಲಗುವುದಿಲ್ಲ. ನನ್ನ ಜೀವ ಇರುವವರೆಗೂ ನಾನು ನಿಮ್ಮ ಜೊತೆ ಇದ್ದು, ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಪೀಣ್ಯ ಕೈಗಾರಿಕೆ ಸಂಘ ಪದಾಧಿಕಾರಿಗಳು ಅಧ್ಯಕ್ಷ ಮುರಳೀಕೃಷ್ಣ ನೇತೃತ್ವದಲ್ಲಿ ದೇವೇಗೌಡರಿಗೆ ಮನವಿ ನೀಡಿದಾಗ, ನಾನು ಇನ್ನು ಒಂದು ವಾರದಲ್ಲಿ ನಿಮ್ಮ ಸಂಘಕ್ಕೆ ಭೇಟಿ ನೀಡಿ, ನಿಮ್ಮ ಜೊತೆ ಮಾತನಾಡುತ್ತೇನೆ. ನಂತರ ಏನು ಮಾಡಬೇಕು ಎಂದು ಯೋಚನೆ ಮಾಡೋಣ. ನಾನು ಸಿಎಂ ಜೊತೆ ಮಾತನಾಡುವಾಗ ಇಲ್ಲಿನ ಶಾಸಕರು, ಅಧಿಕಾರಿಗಳು ಇರ್ತಾರೆ. ಸಮಂಜಸ ಉತ್ತರ ಸಿಗದಿದ್ದರೆ, ಜನರಿಗೆ ಆಗುತ್ತಿರೋ ಅನ್ಯಾಯ ಸರಿ ಪಡಿಸದಿದ್ದರೆ ಅವರ ಮನೆ ಮುಂದೆ ಧರಣಿ ಕೂರುತ್ತೇನೆ ಎಂದರು.

Edited By : Manjunath H D
PublicNext

PublicNext

01/01/2022 10:26 am

Cinque Terre

29.87 K

Cinque Terre

2

ಸಂಬಂಧಿತ ಸುದ್ದಿ