ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಳೆ ಕರ್ನಾಟಕ ಬಂದ್ ಇರೋದಿಲ್ಲ:ಶಾಸಕ ಅರವಿಂದ್ ಲಿಂಬಾವಳಿ

ಬೆಂಗಳೂರು: ನಾಳೆ ಕರ್ನಾಟಕ ಬಂದ್ ಇರೋದಿಲ್ಲ. ಸರ್ಕಾರ ಎಂಇಎಸ್‌ಚುಟುವಟಿಕೆಗಳಿಗೆ ಬೆಂಬಲ ಕೊಟ್ಟಿಲ್ಲ. ಬಂದ್ ಮಾಡುವ ಅವಶ್ಯಕತೆನೂ ಇಲ್ಲ.ನಾಳೆ ಬಂದ್ ಆಗದಂತೆ ನೋಡಿಕೊಳ್ಳೋಣ ಎಂದು ಶಾಸಕ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

ಕನ್ನಡ ನಾಡು,ನುಡಿ,ಜಲದ ವಿಷಯದಲ್ಲಿ ನಾವು ಹಿಂದೇಟು ಹಾಕೋದಿಲ್ಲ. ಹಿಂದೆಯೂ ಸಹ ಕನ್ನಡ ನಾಡು ನುಡಿಗಾಗಿಯೇ ಹೋರಾಟ ಮಾಡಿಯೇ ಉಳಸಿಕೊಂಡಿದ್ದೇವೆ.ಮುಂದೇಯೂ ಉಳಿಸಿಕೊಳ್ಳುತ್ತೇವೆ. ಬಂದ್ ಮಾಡುವವರ ಬಗ್ಗೆ ಯಾರೂ ಚಿಂತಿಸುವ ಅಗತ್ಯ ಇಲ್ಲವೇ ಇಲ್ಲ ಎಂದು ಅರವಿಂದ್ ಲಿಂಬಾವಳಿ ಖಡಕ್ ಆಗಿಯೇ ಮಾತನಾಡಿದ್ದಾರೆ.

ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯದಲ್ಲಿ ಆಯೋಜಿಸಿದ್ದ ಕನ್ನಡ ಬೆಳ್ಳಿ ರಥೋತ್ಸವದ ಕಾರ್ಯಕ್ರಮದಲ್ಲಿ ಅರವಿಂದ್ ಲಿಂಬಾವಳಿ ಭಾಗವಹಿಸಿದ್ದರು. ಆಗಲೇ ಹೀಗೆ ಹೇಳಿಕೆ ಕೊಟ್ಟಿದ್ದಾರೆ.

Edited By : Nagesh Gaonkar
PublicNext

PublicNext

30/12/2021 06:49 pm

Cinque Terre

41.3 K

Cinque Terre

3

ಸಂಬಂಧಿತ ಸುದ್ದಿ