ಬೆಂಗಳೂರು: ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ವಿರೋಧಿಸಿ ದಾಸರಹಳ್ಳಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಟಿ.ದಾಸರಹಳ್ಳಿಯ 8ನೇ ಮೈಲಿ ಜಂಕ್ಷನ್ ಬಳಿ ಇಂದು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಸ್ತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಲು ಕಾರ್ಯಕರ್ತರು ಮುಂದಾದ ವೇಳೆ ಪೊಲೀಸರು ಅಡ್ಡಿ ಪಡಿಸಿ, ಪ್ರತಿಕೃತಿ ಸುಡದಂತೆ ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಉದ್ಧವ್ ಠಾಕ್ರೆ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭ ಅಧ್ಯಕ್ಷ ಗಿರೀಶ್ ಮಾತನಾಡಿ, ಎಂಇಎಸ್ ನ್ನು ಸರ್ಕಾರ ಏಕೆ ಬ್ಯಾನ್ ಮಾಡುತ್ತಿಲ್ಲ?
ನಾವು ಡಿ.31ರಂದು ನಡೆಯುವ ಕರ್ನಾಟಕ ಬಂದ್ ಗೆ ಬೆಂಬಲ ನೀಡ್ತಿಲ್ಲ. ಆದ್ರಿಂದ ನಮಗೇ ನಷ್ಟ ಆಗುತ್ತೆ. ಆದ್ರೆ ನಮ್ಮ ಹೋರಾಟ 31 ಜಿಲ್ಲೆಗಳಲ್ಲಿಯೂ ನಡೆಯುತ್ತಲೇ ಇರುತ್ತೆ. ನಮಗೆ ನ್ಯಾಯ ಸಿಗೋವರೆಗೂ ನಿರಂತರವಾಗಿ ನಾವು ಹೋರಾಟ ಮಾಡ್ತೀವಿ ಎಂದರು.
Kshetra Samachara
28/12/2021 03:13 pm