ಬೆಂಗಳೂರು: ಡಿ.31ರ 'ಕರ್ನಾಟಕ ಬಂದ್' ಗೆ ಜಯ ಕರ್ನಾಟಕ ಸಂಘಟನೆಯಿಂದ ಬೆಂಬಲವಿಲ್ಲ ಎಂದು ಜಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರು ದಾಸರಹಳ್ಳಿಯಲ್ಲಿ ಇಂದು ಸಭೆ ನಡೆಸಿದ ಪದಾಧಿಕಾರಿಗಳು, ಬಳಿಕ ಸುದ್ದಿಗೋಷ್ಠಿ ನಡೆಸಿ, ಕೋವಿಡ್ ನಿಂದ ಜನರು ತತ್ತರಿಸಿ ಹೋಗಿದ್ದಾರೆ.
ಪದೇ ಪದೆ ಬಂದ್ ಕರೆ ಯಿಂದಾಗಿ ಜನರಿಗೆ ಆರ್ಥಿಕ ಹೊರೆಯಾಗ್ತಿದೆ. ನಾಡು-ನುಡಿ ಬಗ್ಗೆ ಇಂತಹ ಸಂದರ್ಭ ಬಂದಾಗ ಕನ್ನಡಿಗರಿಗೆ ಅಸಮಾಧಾನವಾಗುತ್ತೆ. ಸಂಘಟನೆಗಳು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬಂದ್ ಗೆ ಕರೆ ಕೊಡುವುದು ದೊಡ್ಡದಲ್ಲ.
ಸಂಘಟನೆಗಳು ನಾಡು- ನುಡಿ ವಿಚಾರದಲ್ಲಿ ಹೋರಾಟ ಮಾಡಬೇಕು ನಿಜ. ಆದ್ರೆ, ಅದಕ್ಕೂ ಮೊದಲೂ ಜನ್ರಲ್ಲಿ ಜಾಗೃತಿ ಮೂಡಿಸಬೇಕು. ಎಂಇಎಸ್, ಶಿವಸೇನೆ ಪುಂಡಾಟಿಕೆಗೆ ಮೊದಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ತಗೊಳ್ಬೇಕು. ಕೇಂದ್ರ, ರಾಜ್ಯದ ಜನಪ್ರತಿನಿಧಿಗಳು ಬೆಳಗಾವಿ ವಿಚಾರದಲ್ಲಿ ಮೌನ ವಹಿಸಿದ್ದಾರೆ, ಇದು ಸರಿಯಲ್ಲ.
ಇದು ಮುಂದುವರೆದಲ್ಲಿ ಜಯ ಕರ್ನಾಟಕವು ಜನಪ್ರತಿನಿಧಿಗಳ ಮನೆಗಳ ಎದುರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ, ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತೆ. ಇದು ಜಯ ಕರ್ನಾಟಕದ ಎಚ್ಚರಿಕೆ ಎಂದರು.
Kshetra Samachara
24/12/2021 08:47 pm