ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಂಇಎಸ್ ನಿಷೇಧಿಸಲು ವಾಟಾಳ್‌ ಆಗ್ರಹ; ಡಿ.31ರಂದು ʼಕರ್ನಾಟಕ ಬಂದ್ʼ ಗೆ ಕರೆ

ಬೆಂಗಳೂರು: ರಾಜ್ಯದಲ್ಲಿ ಎಂಇಎಸ್ ಸಂಘಟನೆಯ ನಿಷೇಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಡಿ. 31ರಂದು ʼಕರ್ನಾಟಕ ಬಂದ್ʼ ಮಾಡಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಡಿ.31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ಅಗತ್ಯ ವಸ್ತು, ಸೇವೆಗಳ ಹೊರತಾಗಿ ಉಳಿದೆಲ್ಲವೂ ಆ ದಿನ ಬಂದ್ ಆಗಲಿದೆ. ಎಂಇಎಸ್ ಪುಂಡಾಟಿಕೆ ಅತಿಯಾಗಿದ್ದು, ರಾಜ್ಯದಲ್ಲಿ ನಿಷೇಧಿಸಲೇ ಬೇಕೆಂದು ಆಗ್ರಹಿಸಿದರು. ಅದಕ್ಕೂ ಮುಂಚಿತವಾಗಿ ಸರ್ಕಾರ, ಎಂಇಎಸ್ ನಿಷೇಧಿಸಿದರೆ ಬಂದ್ ವಾಪಸ್ ಪಡೆಯಲಾಗುತ್ತದೆ. ಇಲ್ಲವಾದರೆ ಕರ್ನಾಟಕ ಬಂದ್ ಗೆ ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳು ಬೆಂಬಲ ನೀಡಬೇಕೆಂದು ವಾಟಾಳ್ ನಾಗರಾಜ್ ವಿನಂತಿಸಿದ್ದಾರೆ.

ಆದರೆ, ಕೆಲವು ಕನ್ನಡಪರ ಸಂಘಟನೆಗಳು ʼಕರ್ನಾಟಕ ಬಂದ್ʼಗೆ ವಿರೋಧ ವ್ಯಕ್ತಪಡಿಸಿದೆ.

Edited By : Nagesh Gaonkar
Kshetra Samachara

Kshetra Samachara

22/12/2021 03:53 pm

Cinque Terre

646

Cinque Terre

0

ಸಂಬಂಧಿತ ಸುದ್ದಿ