ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈರತಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ; ಸಚಿವರ ಮೇಲಿನ ಆರೋಪ ಸುಳ್ಳೆಂದ ಭೂ ಮಾಲೀಕರು

ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವಿರುದ್ಧ ಭೂ ಕಬಳಿಕೆ ವಿಚಾರವಾಗಿ ಇಂದು ಕೆ.ಆರ್. ಪುರ ಬಿಬಿಎಂಪಿ ಕಚೇರಿ ಎದುರು ಕೆ.ಆರ್. ಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿ, ರಾಜೀನಾಮೆಗೆ ಒತ್ತಾಯಿಸಿದರು. ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ , ಭೂ ಕಬಳಿಸಿದ ಬೈರತಿ ಬಸವರಾಜ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಇತ್ತ ಭೂ ಮಾಲೀಕ ಅಣ್ಣಯ್ಯಪ್ಪ ಅವರ ಕುಟುಂಬದ ಸದಸ್ಯರು ಬೈರತಿ ಬಸವರಾಜ್ ತಮ್ಮ ಯಾವುದೇ ಭೂ ಕಬಳಿಕೆ ಮಾಡಿಲ್ಲ. ಅವರ ಮೇಲಿನ ಆರೋಪ ಸುಳ್ಳು ಎಂದರು. ಅಲ್ಲದೆ, ಸಂಪೂರ್ಣವಾಗಿ ಹಣ ಸಂದಾಯವಾದ ಬಳಿಕವೇ ಭೂಮಿಯನ್ನು ನೀಡಲಾಗಿದೆ ಎಂದು ಸಚಿವರ ಮೇಲಿನ ಆರೋಪವನ್ನು ತಳ್ಳಿಹಾಕಿದರು ಹಾಗೂ ಈ ವಿಚಾರವನ್ನು ಕೈ ಬಿಡುವಂತೆ ಮನವಿಯನ್ನೂ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

19/12/2021 09:16 pm

Cinque Terre

596

Cinque Terre

0

ಸಂಬಂಧಿತ ಸುದ್ದಿ