ನೆಲಮಂಗಲ: ಬೆಳಗಾವಿ ಗಡಿಯಲ್ಲಿ ಎಂಇಎಸ್ ಪುಂಡರಿಂದ ನಾಡಧ್ವಜಕ್ಕೆ ಬೆಂಕಿ, ಶಿವಸೇನೆಯ ತಿಳಿಗೇಡಿ ಕಾರ್ಯಕರ್ತರಿಂದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ ಸೇರಿದಂತೆ ಕರ್ನಾಟಕ ನೋಂದಣಿ ಸಂಖ್ಯೆಯ ಸಾರಿಗೆ ಬಸ್ ಗಳಿಗೆ ಹಾನಿ ಮಾಡಿ ಪುಂಡಾಟ ಮೆರೆಯುತ್ತಿರೋ ಮತಿಹೀನ ಕಾರ್ಯಕರ್ತರ ದುರ್ವರ್ತನೆ ಖಂಡಿಸಿ ಬೆಂಗಳೂರಿನಿಂದ ಕನ್ನಡಪರ ಸಂಘಟನೆಗಳು ಬೆಳಗಾವಿ ಚಲೋ ಗೆ ಸಿದ್ಧತೆ ನಡೆಸುತ್ತಿದೆ.
ಹೀಗಾಗಿ ಬೆಂಗಳೂರಿಂದ ತುಮಕೂರು ಟೋಲ್ ಬಿಟ್ಟು ಬೆಳಗಾವಿ ಕಡೆ ಪ್ರಯಾಣ ಬೆಳೆಸಿರುವ ಕನ್ನಡಪರ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು, ಬೆಂಬಲಿಗರು, ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಕನ್ನಡಿಗರ ಮೇಲಿನ ದಬ್ಬಾಳಿಕೆ ನಿಲ್ಲಬೇಕೆಂದು ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಧಾರವಾಡದ ಮೂಲಕ ಬೆಳಗಾವಿಗೆ ತೆರಳುತ್ತಿದ್ದು, ನಾಳೆ ಬೆಳಗ್ಗೆ ಕಿತ್ತೂರು ರಾಣಿ ಚೆನ್ನಮ್ಮನಿಗೆ ಮಾಲಾರ್ಪಣೆ ಮಾಡಿ ಬಳಿಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.
Kshetra Samachara
19/12/2021 06:29 pm