ದೇವನಹಳ್ಳಿ : 17 ಕೋಟಿ ಮೌಲ್ಯದ ಸರ್ಕಾರಿ ಜಾಗವನ್ನು ಅಕ್ರಮವಾಗಿ ನಕಲಿ ಖಾತೆಗಳನ್ನ ಭೂಗಳ್ಳರು ಮಾಡಿಕೊಂಡಿದ್ದು, ಸರ್ಕಾರಿ ಜಾಗವನ್ನು ಉಳಿಸುವಂತೆ ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ, ಪ್ರಜಾವಿಮೋಚಾನಾ ಚಳುವಳಿ ಸಂಘಟನೆ
ದೇವನಹಳ್ಳಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ದೇವನಹಳ್ಳಿ ತಾಲೂಕಿನ ಚಿಕ್ಕೋಬದೇನಹಳ್ಳಿ ಗ್ರಾಮದ ಗ್ರಾಮ ಠಾಣಾದ 8 ಎಕರೆ 4 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ಖಾತೆಗಳನ್ನು ಮಾಡಲಾಗಿದೆ, ಸುಮಾರು 17 ಕೋಟಿ ಮೌಲ್ಯದ ಸರ್ಕಾರಿ ಜಾಗ ಭೂಗಳ್ಳರ ಪಾಲಾಗುತ್ತಿದೆ, ನಕಲಿ ಖಾತೆ ಸೃಷ್ಟಿ
ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಆವರಣದ ಮುಂಭಾಗದಲ್ಲಿ ರೈತ ಸಂಘ, ಹಸಿರು ಸೇನೆ, ಪ್ರಜಾವಿಮೋಚಾನಾ ಚಳುವಳಿ ಸಂಘಟನೆ ವತಿಯಿಂದ ಗ್ರಾಮಸ್ಥರೊಡನೆ ಪ್ರತಿಭಟನೆ ನಡೆಸಿದರು.
ಪ್ರಜಾ ವಿಮೋಚನ ಚಳುವಳಿ ಸಂಘಟನೆ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ಸ್ವಾಭಿಮಾನ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟಿಸಲಾಗುತ್ತಿದೆ. ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೋಬದೇನಹಳ್ಳಿ ಗ್ರಾಮದಲ್ಲಿರುವ ಗ್ರಾಮಠಾಣ ಜಮೀನು ಸುಮಾರು ೧೭ಕೋಟಿ ರೂ.ಗಳ ಬೆಲೆ ಬಾಳುವಂತಹದ್ದು, ಇಂತಹ ಜಮೀನನ್ನು ಭೂ ಕಬಳಿಕೆದಾರರು ಅಧಿಕಾರಿಗಳ ಜೊತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಂಡಿರುವುದನ್ನು ಕೂಡಲೇ ವಜಾಗೊಳಿಸಿ, ಅಕ್ರಮದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ರು.
Kshetra Samachara
18/12/2021 02:48 pm