ದೊಡ್ಡಬಳ್ಳಾಪುರ : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವರಾದ ಆರ್. ಎಲ್. ಜಾಲಪ್ಪ(97) ಅವರು ಕೋಲಾರದ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನರಾದರು.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದ ನಿವಾಸಿ ಆರ್ .ಎಲ್. ಜಾಲಪ್ಪ ಅವರು ತಮ್ಮ ರಾಜಕೀಯ ಜೀವನವನ್ನು ತೂಬಗೆರೆಯಿಂದ ಪ್ರಾರಂಭಿಸಿ, ವಿಧಾನ ಪರಿಷತ್ ಸದಸ್ಯ, ವಿಧಾನಸಭೆ ಸದಸ್ಯ, ಲೋಕಸಭೆ ಸದಸ್ಯರಾಗಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನು ತೂಬಗೆರೆ ಗ್ರಾಮದ ಮನೆ ಬಳಿ ಮಾಡಲಾಗಿದೆ. ಜಾಲಪ್ಪನವರ ಅಭಿಮಾನಿಗಳು, ರಾಜಕೀಯ ಮುಖಂಡರು ಅಂತಿಮ ದರ್ಶನಕ್ಕೆ ಬರುವ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೊಡ್ಡಬಳ್ಳಾಪುರ ನಗರದ ಜಾಲಪ್ಪ ಎಂಜಿನಿಯರಿಂಗ್ ಕಾಲೇಜ್ ಅವರಣದಲ್ಲಿ ಅಂತಿಮ ಕಾರ್ಯ ನೆರವೇರಲಿದೆ.
Kshetra Samachara
17/12/2021 08:09 pm