ದೊಡ್ಡಬಳ್ಳಾಪುರ : ಬಿಬಿಎಂಪಿ ಕಸದ ವಿರುದ್ಧ ಸ್ಥಳೀಯರು ನಡೆಸುತ್ತಿರುವ ಧರಣಿ 8 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಹೋರಾಟಕ್ಕೆ ಹೆಚ್ ಡಿ ಕುಮಾರಸ್ವಾಮಿ ಕೈಜೋಡಿಸಿದ್ದಾರೆ, ಡಿಸೆಂಬರ್ 11ರೂಳಗೆ ಸಮಸ್ಯೆ ಬಗೆ ಹರಿಯದಿದ್ದಲ್ಲಿ ನಾನೇ ಧರಣಿಗೆ ಕುರುವ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಗರೇನಹಳ್ಳಿಯಲ್ಲಿರುವ ಬಿಬಿಎಂಪಿಯ ಎಂಎಸ್‌ಜಿಪಿ ಕಸ ಘಟಕದ ವಿರುದ್ಧ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದೆ. ಎಂಎಸ್‌ಜಿಪಿ ಘಟಕ ಮುಚ್ಚುವಂತೆ ಪಟ್ಟು ಹಿಡಿದು ನಡೆಯುತ್ತಿರುವ ಹೋರಾಟ ಎಂಟನೇ ದಿನಕ್ಕೆ ಕಾಲಿಟ್ಟಿದ್ದು ವ್ಯಾಪಕ ಬೆಂಬಲವಾಗುತ್ತಿದೆ.
ಈ ಬೆನ್ನಲ್ಲೇ ಗುರುವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಾಕಾರರ ಜೊತೆ ಸಮಾಲೋಚನೆ ನಡೆಸಿ ಎಂಎಸ್‌ಜಿಪಿ ಘಟಕ ಸೃಷ್ಟಿಸಿರುವ ವಿಷಕಾರಿ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಸ್ಥಳೀಯರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು.
ಅಷ್ಟೆ ಅಲ್ಲದೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಘಟಕದ ಆಯುಕ್ತ ಸರ್ಫರಾಜ್‌ಖಾನ್‌ಗೆ ದೂರವಾಣಿ ಕರೆ ಮಾಡಿದ ಎಚ್.ಡಿ ಕುಮಾರಸ್ವಾಮಿ, ಎಂಎಸ್‌ಜಿಪಿ ಘಟಕ ಸೃಷ್ಟಿಸಿರುವ ಅವಾಂತರಗಳ ಬಗ್ಗೆ ಏಕೆ ಕ್ರಮ ವಹಿಸಲಿಲ್ಲ ಎಂದು ತರಾಟೆ ತೆಗೆದುಕೊಂಡರು. ಅಷ್ಟೇ ಅಲ್ಲದೆ, ಕೂಡಲೇ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು,ಸ್ಥಳೀಯರ ಹೋರಾಟ ನ್ಯಾಯಯುತವಾಗಿದೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಯತ್ನವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಾಡಬಾರದು ಎಂದರು. ಅಷ್ಟೇ ಅಲ್ಲದೆ, ಡಿ 11ರೊಳಗೆ ಸ್ಥಳೀಯರ ಹೋರಾಟದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಮಾತನಾಡುತ್ತೇನೆ. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಡಿ.11ರ ನಂತರ ನಾನೇ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು.
Kshetra Samachara
02/12/2021 03:36 pm