ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಕಿರುಕುಳ; ಪ್ರತಿಭಟನೆ ಜಾಥಾ

ಬೆಂಗಳೂರು: ದೇಶದೆಲ್ಲೆಡೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಮತಾಂತರ ವಿಚಾರದಲ್ಲಿ ನೀಡುತ್ತಿರುವ ಕಿರುಕುಳ ಖಂಡಿಸಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ನಡೆಯಿತು.

ಚಂದಾಪುರ ವೃತ್ತದಿಂದ ಆನೇಕಲ್ ಪಟ್ಟಣದ ತಾಲೂಕು ಕಚೇರಿವರೆಗೆ ಸುಮಾರು 12 ಕಿ.ಮೀ. ವರೆಗೆ ನಡೆದ ಬೃಹತ್ ಜಾಥಾದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ದಲಿತ ಕ್ರೈಸ್ತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಪಾಲ್ಗೊಂಡಿದ್ದರು.

ದಲಿತ ಕ್ರೈಸ್ತ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ ವತಿಯಿಂದ ಈ ಪ್ರತಿಭಟನೆ ರ್ಯಾಲಿ ಸಂಘಟಿಸಿದ್ದು, ಆನೇಕಲ್ ತಾಲೂಕು ಕಚೇರಿಯಲ್ಲಿ ದಂಡಾಧಿಕಾರಿಗೆ ಮನವಿ ಅರ್ಪಿಸಿ ರ್ಯಾಲಿ ಕೊನೆಗೊಳಿಸಲಾಯಿತು.

ನಂತರ ಆನೇಕಲ್ ಪಟ್ಟಣದ ರಾಮ ಕುಟೀರದಲ್ಲಿ ಕಾರ್ಯಕ್ರಮ ನಡೆಸಿದ ಪ್ರತಿಭಟನೆಕಾರರು, ಮತಾಂತರ ವಿಚಾರದಲ್ಲಿ ಕ್ರೈಸ್ತರಿಗೆ ಅನ್ಯಾಯವಾಗುತ್ತಿದೆ. ಹಲವೆಡೆ ಚರ್ಚ್ ಗಳಿಗೆ ನುಗ್ಗಿ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸರಕಾರ ಕೂಡಲೇ ಎಚ್ಚೆತ್ತುಕೊಂಡು ನಮಗೆ ನ್ಯಾಯ ದೊರಕಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

24/11/2021 10:58 pm

Cinque Terre

262

Cinque Terre

0

ಸಂಬಂಧಿತ ಸುದ್ದಿ