ಬೆಂಗಳೂರು : ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರದ ಹಲವೆಡೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ರಾಜಕಾಲುವೆಗಳನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ರಾಜಕಾಲುವೆ ಸಮಸ್ಯೆ ಮಳೆ ಹೆಚ್ಚಾದಾಗೆಲ್ಲ ಆಗ್ತಾಯಿದ್ದು, ಯಲಹಂಕ ಕಣಿವೆ, ಹೆಬ್ಬಾಳ ಕಣಿವೆ, ಕೆ ಆರ್ ಪುರ ಕಣಿವೆವರೆಗೂ ಮಳೆ ನೀರು ಹರಿದು ಬರುತ್ತಿದೆ. ಹಲವು ಬಡಾವಣೆಗಳಲ್ಲಿ ನೀರು ನುಗ್ಗಿ ಸಮಸ್ಯೆಯಾಗಿದೆ. ಹೆಬ್ಬಾಳ ಕಣಿವೆಯಿಂದ ನೀರು ಹರಿದು ಬರಲು ಕೆಲ ಕಡೆ ಅಡ್ಡಿವುಂಟಾಗಿದೆ.ಇನ್ನೊಂದು ರೈಲ್ವೆ ವೆಂಟ್ ನಿಂದಲೂ ಸಮಸ್ಯೆಯಿದ್ದು, ಈ ಎರಡೂ ವೆಂಟ್ ಗಳ ಬಗ್ಗೆ ರೈಲ್ವೆ ಇಲಾಖೆ ಜತೆ ಚರ್ಚಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಕೆಆರ್ ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬೈರತಿ ಬಸವರಾಜ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.ಇಲ್ಲ ಅಂದ್ರೆ ನಾವೂ ಇಲ್ಲಿ ನಿಂತುಕೊಳ್ಳೋಕು ಆಗ್ತಿರಲಿಲ್ಲ ಎಂದರು. ತೆರವು ಕಾರ್ಯಾಚರಣೆ ಶಾಶ್ವತ ಪರಿಹಾರ ಆಗಲೇಬೇಕಾಗಿದೆ. ನಾವು ಈ ಬಗ್ಗೆ ಶೀಘ್ರವೇ ಕ್ರಮ ಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.ಬಡವರಿಗೆ ಬದುಕಿದೆ, ಅವರಿಗೆ ಸ್ವಲ್ಪ ಸಮಯವಕಾಶ ಕೊಟ್ಟು, ಪರ್ಯಾಯ ವ್ಯವಸ್ಥೆಯ ಕಲ್ಪಿಸಿ, ಆ ನಂತರ ಅದನ್ನು ಮಾಡ್ತೇವೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಪ್ರತಿ ವರ್ಷವೂ ಮಳೆಯಿಂದ ಈ ಭಾಗದ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇನ್ನಾದರೂ ಸಮಸ್ಯೆ ಬಗೆ ಹರಿಯುತ್ತಾ ಕಾದು ನೋಡಬೇಕಾಗಿದೆ.
Kshetra Samachara
24/11/2021 10:20 pm