ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉದ್ಯಮಿ ಕೆ.ಜಿ.ಎಫ್ ಬಾಬು ಕಣಕ್ಕಿಳಿದಿದ್ದಾರೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗಿರುವ ನಾಮಪತ್ರಲ್ಲಿ ಘೋಷಿಸಲಾಗಿರುವ ಪ್ರಕಾರ ಕೆಜಿಎಫ್ ಬಾಬು ಅವರು ಒಟ್ಟು 1,643 ಕೋಟಿ ಸ್ಥಿರಾಸ್ತಿ ಮೌಲ್ಯ ಹೊಂದಿದ್ದಾರೆ. ಒಟ್ಟು ಮೂರು ಕ್ರಿಮಿನಲ್ ಕೇಸ್ ಪೆಂಡಿಂಗ್ ಇರುವ ಅವರ ಇತರ ಆಸ್ತಿಯ ಪಟ್ಟಿ ಈ ಕೆಳಗಿನಂತಿದೆ.
*97 ಕೋಟಿ ಚರಾಸ್ತಿ
*23 ಬ್ಯಾಂಕ್ ಅಕೌಂಟ್
*58 ಕೋಟಿ ಒಟ್ಟು ಲೋನ್
*2 ಕೋಟಿ 99 ಲಕ್ಷ ಬೆಲೆಬಾಳುವ ಮೂರು ಕಾರು
*1 ಕೋಟಿ 11 ಲಕ್ಷ ಬೆಲೆಬಾಳುವ ವಾಚ್
*ಅಂದಾಜು 4.5 ಕೆಜಿ ಚಿನ್ನ
*ಒಂದು ಲಕ್ಷ ಬೆಲೆಯ ನಾಲ್ಕು ಮೊಬೈಲ್ ಗಳು
*48 ಕೋಟಿ ಬೆಲೆಬಾಳುವ ಒಟ್ಟು ಮೂರು ಕೃಷಿ ಭೂಮಿಗಳು
*1593 ಕೋಟಿ ಬೆಲೆಬಾಳುವ ಒಟ್ಟು 26 ಸೈಟ್ ಗಳು
*ಮೂರು ಕೋಟಿ ಬೆಲೆಬಾಳುವ ಮನೆ
Kshetra Samachara
23/11/2021 10:25 pm