ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಚಿವ ಸುರೇಶ್‌ಕುಮಾರ್ ಮನೆ ಮುಂದೆ ಪೊರಕೆ ಸೇವೆ: ಎಎಪಿ ಎಚ್ಚರಿಕೆ

ಬೆಂಗಳೂರು: ಮಾಜಿ ಸಚಿವ ಸುರೇಶ್‌ಕುಮಾರ್ ಅವರ ಮನೆ ಮುಂದೆ ಪೊರಕೆ ಸೇವೆ ಮಾಡೋದಾಗಿ ಎಎಪಿ ಎಚ್ಚರಿಕೆ ನೀಡಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕೋವಿಡ್ ಸಂತ್ರಸ್ತರಿಗೆ ಹದಿನೈದು ದಿನಗಳೊಳಗೆ ಪರಿಹಾರಧನ ವಿತರಿಸದಿದ್ದರೆ ಸುರೇಶ್ ಕುಮಾರ್ ಕಚೇರಿಗೆ ಮುತ್ತಿಗೆ ಹಾಕಲು ಎಎಪಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷರಾದ ಬಿ.ಟಿ.ನಾಗಣ್ಣ, ಕೋವಿಡ್ ಪರಿಹಾರ ಕೋರಿ ರಾಜಾಜಿನಗರ ಕ್ಷೇತ್ರದಲ್ಲಿ ಸೇವಾ ಸಿಂಧು ಮೂಲಕ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಹೆಚ್ಚಿನವರು ಮನೆಗೆಲಸದವರು, ಗಾರ್ಮೆಂಟ್ಸ್ ನೌಕರರು, ಕ್ಯಾಬ್ ಚಾಲಕರು, ದಿನಗೂಲಿ ನೌಕರರು ಹಾಗೂ ಬಡ-ಮಧ್ಯಮ ವರ್ಗದವರಾಗಿದ್ದಾರೆ. ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಈ ವರೆಗೆ ಒಬ್ಬರಿಗೂ ಒಂದು ರೂಪಾಯಿ ಪರಿಹಾರ ದೊರೆತಿಲ್ಲ. ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಕ್ಷೇತ್ರದ ಸಂತ್ರಸ್ತರಿಗೆ ಕೊಡಿಸುವಲ್ಲಿ ಮಾಜಿ ಮಂತ್ರಿಯೂ ಆಗಿರುವ ಶಾಸಕ ಸುರೇಶ್ ಕುಮಾರ್ ಫೇಲ್ ಆಗಿದ್ದಾರೆ ಎಂದು ಎಎಪಿ ಆರೋಪಿಸಿದೆ.

Edited By : Nagaraj Tulugeri
Kshetra Samachara

Kshetra Samachara

17/11/2021 05:32 pm

Cinque Terre

818

Cinque Terre

0

ಸಂಬಂಧಿತ ಸುದ್ದಿ