ಬೆಂಗಳೂರು: ಉಡುಪಿ ಪೇಜಾವರ ಶ್ರೀಗಳ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಕೊಟ್ಟಿದ್ದ ಹೇಳಿಕೆಯನ್ನ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತೀವ್ರವಾಗಿಯೇ ಖಂಡಿಸಿದ್ದಾರೆ. ಇನ್ಮುಂದೆ ಈ ರೀತಿ ಹೇಳಿಕೆ ಕೊಟ್ರೆ ಸರಿಯಿರಲ್ಲ ಅಂತಲೂ ಎಚ್ಚರಿಕೆನೂ ಕೊಟ್ಟಿದ್ದಾರೆ.
ಸಂಗೀತ ನಿರ್ದೇಶಕ ಹಂಸಲೇಖ ಅವರ ಬಗ್ಗೆ ನನಗೆ ಗೌರವ ಇತ್ತು.ಆದರೆ, ಉಡುಪಿ ಪೇಜಾವರ ಶ್ರೀಗಳ ಬಗ್ಗೆ ಅವರು ಕೀಳುಮಟ್ಟದ ಹೇಳಿಕೆ ನೀಡಿ ಪ್ರಚಾರ ಪಡೆದಿದ್ದಾರೆ. ಪೇಜಾವರರಿಗೆ ದಲಿತರ ಬಗ್ಗೆ ಕಾಳಜಿ ಇತ್ತು.
ಅದಕ್ಕೇನೆ ಅವರ ಕಾಲೋನಿಗೆ ಹೋಗಿ ಅವರ ಏಳಿಗೆ ಬಯಸಿದ್ರು. ಇಂತಹ ಶ್ರೀಗಳ ಬಗ್ಗೆ ಹಂಸಲೇಖ ಈ ರೀತಿ ಹೇಳಿಕೆ ಕೊಟ್ಟಿರೋದು ಸರಿ ಅಲ್ಲವೇ ಅಲ್ಲ. ಇನ್ಮುಂದೆ ಈ ರೀತಿ ಹೇಳಿಕೆ ಕೊಡಲೇಬಾರದು ಅಂತಲೇ ಎಚ್ಚರಿಸಿದ್ದಾರೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ.
Kshetra Samachara
15/11/2021 09:02 pm