ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ,ಕಾಂಗ್ರೆಸ್ ಕೈವಾಡವಿದೆ : ಹೆಚ್ ಡಿಕೆ

ಬೆಂಗಳೂರು : ಬಿಟ್ ಕಾಯಿನ್ ಆರೋಪಿಗೆ ಶ್ರೀಕಿಗೆ ಜಾಮೀನು ಸಿಕ್ಕಿದೆ. ಆದರೆ ಜಾಮೀನು ಕೊಡಲು ವಾದಿಸಿದ್ದು ಯಾರು, ಶ್ಯೂರಿಟಿ ಕೊಟ್ಟಿದ್ಯಾರು? ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ ಡಿಕೆ ಪ್ರಶ್ನಿಸಿದ್ದಾರೆ.

ಬಿಟ್ ಕಾಯಿನ್ ಕೇಸ್ ನಲ್ಲಿ ಕೆಲವು ಹೆಸರು ಕೇಳಿ ಬರುತ್ತಿವೆ. ಚಾರ್ಜ್ ಶೀಟ್ ಹಾಕುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಕೇಳಿಬರುತ್ತಿದೆ. ಆದರೆ ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ಕೈಗಳ ಕೈವಾಡವಿರುವುದರಿಂದ ಪ್ರಕರಣವನ್ನ ಮುಚ್ಚಿಹಾಕಲು ಸಕಲ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ವಿಪರ್ಯಾಸ ನೋಡಿ ಬಿಟ್ ಕಾಯಿನ್ ಆರೋಪಿಗೆ ಜಾಮೀನು ಕೊಡಿಸಿದ್ಯಾರು? ಅಷ್ಟು ಸುಲಭವಾಗಿ ಆರೋಪಿಗೆ ಜಾಮೀನು ಹೇಗೆ ಸಿಕ್ಕಿದೆ? ಸರ್ಕಾರ ಅಭಿಯೋಜಕರು ಹೇಗೆ ವಾದ ಮಾಡಿದ್ದಾರೆ? ಜನಧನ್ ಖಾತೆಗಳಿಂದ ಸಾವಿರಾರು ಕೋಟಿ ಕಳುವು ಶಂಕೆಯಿದೆ.

ಆದರೆ ಕೋಟ್ಯಾಂತರ ರೂ.ಕಳ್ಳತನದಲ್ಲಿ 1, 2 ರೂ. ಶ್ರೀಕಷ್ಣ ಕದ್ದಿದ್ದಾನೆಂಬ ಮಾಹಿತಿ ಇದೆ. ಆದರೆ ಉಳಿದ ವಿಚಾರದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಾ. ಇದು ಅಂತಾರಾಷ್ಟ್ರೀಯ ಮಟ್ಟದ ಪ್ರಕರಣವಾಗಿದೆ. ಇದರಲ್ಲಿ ಎರಡೂ ಪಕ್ಷಗಳ ನಾಯಕರೂ ಶಾಮೀಲಾಗಿದ್ದಾರೆ ಎಂದು ಹೆಚ್ ಡಿಕೆ ಆರೋಪ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/11/2021 06:54 pm

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ