ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ವೈಫಲ್ಯದ ವಿಶ್ವಗುರು:100 ಕೋಟಿ ಲಸಿಕೆ ಸಂಭ್ರವನ್ನ ಟೀಕಿಸಿದ ಸಿದ್ದರಾಮಯ್ಯ

ಬೆಂಗಳೂರು: ಭಾರತೀಯ ಜನತಾ ಪಕ್ಷ ಇವತ್ತು 100 ಕೋಟಿ ಲಸಿಕೆ ಕೊಟ್ಟ ಸಂಭ್ರಮಾಚರಣೆಯಲ್ಲಿದೆ. ಆದರೆ ಇತ್ತ ಮಾಜಿ ಸಿಎಂ.ಸಿದ್ಧರಾಮಯ್ಯ ಇಡೀ ಸಂಭ್ರಮಾಚಾರಣೆಯನ್ನ ವ್ಯಂಗ್ಯವಾಡಿದ್ದಾರೆ. ಇದ್ಯಾವ ಸಂಭ್ರಮಾಚಾರಣೆ. 'ವೈಫಲ್ಯದ ವಿಶ್ವಗುರು' ಕುಖ್ಯಾತಿಗಾಗಿಯೇ ಅಂತಲೇ ಪ್ರಧಾನಿ ಮೋದಿಯನ್ನ ಟ್ವಿಟರ್ ಮೂಲಕವೇ ಕುಟುಕಿದ್ದಾರೆ.

ದೇಶದ ಶೇಕಡ-21 ರಷ್ಟು ಜನಸಂಖ್ಯೆಗೆ ಮಾತ್ರ ಲಸಿಕೆ ನೀಡಲಾಗಿದೆ. ಅಂದ್ರೆ, ದೇಶದ 68 ಕೋಟಿ ಜನಕ್ಕೆ ಇನ್ನೂ ಒಂದೇ ಒಂದು ಡೋಸ್ ಲಸಿಕೆ ನೀಡಲಾಗಿಲ್ಲ.ಹೀಗಿದ್ದರೂ ಕೇಂದ್ರ ಸರ್ಕಾರ 100 ಕೋಟಿ ಲಸಿಕೆ ನೀಡಿರೋ ಸಂಭ್ರಮದಲ್ಲಿದೆ. ಲೆಕ್ಕದಂತೆ ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನಕ್ಕೆ ಎರಡು ಡೋಸ್ ಲಸಿಕೆ ನೀಡಿದೆ ನರೇಂದ್ರ ಮೋದಿ ಸರ್ಕಾರ,ಅವಸರದಲ್ಲಿಯೇ 100 ಕೋಟಿ ಲಸಿಕೆಯ ನೀಡಿರೋ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರೋದು ಹಾಸ್ಯಾಸ್ಪದ ಅಂತ ಚುಚ್ಚಿದ್ದಾರೆ.

ಡಿಸೆಂಬರ್-31 ರ ಒಳಗೆ ಮೊದಲೇ ಘೋಷಿಸಿದಂತೆ, ದೇಶದ 103 ಕೋಟಿ ವಯಸ್ಸಕರಿಗೆ ಎರಡೂ ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗುತ್ತದೆ.ಈಗ ಹೇಳ್ತಿರೋದು 100 ಕೋಟಿ ಲಸಿಕೆ ಮಾತ್ರ. ಪ್ರತಿ ದಿನ 1.51 ಕೋಟಿ ಲಸಿಕೆ ನೀಡಿದ್ರೆ ಮಾತ್ರ ಗುರಿ ತಲುಪಲು ಸಾಧ್ಯ.ಇದಕ್ಕೆ ಬೇಕಾಗಿರೋದು ಸಿದ್ಧತೆ ಹೊರತು ಖಾಲಿ ತಟ್ಟೆ ಪ್ರಚಾರ ಅಲ್ಲವೇ ಅಲ್ಲ ಅಂತಲೇ, ತಮ್ಮ ಸಾಮಾಜಿಕ ತಾಣದ ಅಧಿಕೃತ ಪೇಜ್ ಅಲ್ಲಿ ವಿವರಣೆ ಕೊಟ್ಟಿದ್ದಾರೆ ಸಿದ್ದರಾಮಯ್ಯ.

Edited By :
Kshetra Samachara

Kshetra Samachara

22/10/2021 06:50 pm

Cinque Terre

406

Cinque Terre

0

ಸಂಬಂಧಿತ ಸುದ್ದಿ