ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ : ಆರ್. ಅಶೋಕ್

ಬೆಂಗಳೂರು: ಕುಮಾರಸ್ವಾಮಿ ಯಾವುದೋ ಪುಸ್ತಕ ಓದಿದ್ದಾರೆ. ಪುಸ್ತಕದಲ್ಲಿರುವುದು ಎಲ್ಲವೂ ನಿಜವಲ್ಲ, ಅದು ಅವರವರ ಭಾವನೆಗೆ ತಕ್ಕಂತೆ ಬರೆದಿರುತ್ತಾರೆ ಎಂದು ಆರ್ ಎಸ್ ಎಸ್ ವಿರುದ್ಧ ಟೀಕೆ ಮಾಡಿದ ಎಚ್ ಡಿಕೆ ಗೆ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವ ಅಧಿಕಾರವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ಕೊಟ್ಟಿಲ್ಲ ಎಂದರು.

ಇವತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಆರ್ ಎಸ್ ಎಸ್ ಕಾರಣ. ಆರ್ ಎಸ್ಎಸ್ ಒಂದು ದೇಶ ಭಕ್ತಿ ಸಂಸ್ಥೆ. ತುರ್ತು ಪರಿಸ್ಥಿತಿಯಲ್ಲಿ ಅತೀ ಹೆಚ್ಚು ಆರ್ ಎಸ್ ಎಸ್ ನವರು ಬಂಧಿಯಾಗಿದ್ರು. IAS, IPS ಪಾಸಾಗುವುದು ಒಂದು ಪರೀಕ್ಷೆ ಮೂಲಕವಾಗಿದೆ. ಇದರಲ್ಲಿ ಕುಮಾರಸ್ವಾಮಿ ತಪ್ಪು ಹುಡುಕುವುದು ಸರಿಯಲ್ಲ. ಕುಮಾರಸ್ವಾಮಿ ಪಾಕಿಸ್ತಾನದ ವ್ಯವಸ್ಥೆ ನೋಡಿ ಹೇಳಿರಬೇಕು, ಇದು ಭಾರತ, ಇಲ್ಲಿ ಅಂತಹ ವ್ಯವಸ್ಥೆ ಇರಲ್ಲ ಎಂದರು.

ಕುಮಾರಸ್ವಾಮಿಗೆ ಒಂದೇ ನಿಲುವಿಲ್ಲ ಹಿಂದೆ ನಮ್ಮಲ್ಲಿ104 ಸೀಟ್ ಇದ್ರು ಜೆಡಿಎಸ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡ್ಕೊಂಡಿತ್ತು ಜೆಡಿಎಸ್ ಅವರ ನಡೆ ನಿಮಿಷ ನಿಮಿಷಕ್ಕೆ ಬದಲಾಗುತ್ತದೆ ಎಂದರು.

ಇನ್ನು ನನ್ನ ಸೋಲಿಗೆ RSS ಕಾರಣ ಎಂಬ ಮಲ್ಲಿಕಾರ್ಜುನ ಖರ್ಗೆ ಅವರು ನಿರಂತರವಾಗಿ ಹೋರಾಟ ಮಾಡ್ಲಿ. ಆರ್ ಎಸ್ ಎಸ್ ಯಾವುದೇ ಚುನಾವಣೆಯಲ್ಲಿ ಭಾಗವಹಿಸಲ್ಲ. ನಾವೆಲ್ಲ RSS , ನಮಗೆ ಹೆಮ್ಮೆ ಇದೆ. ಕೆಲವರು ಕಮ್ಯೂನಿಸ್ಟ್ ಸಿದ್ದಾಂತ ಕಡೆಯಿಂದ ಬಂದಿರ್ತಾರೆ, ಸಂಸ್ಥೆ ಬಗ್ಗೆ ತಿಳಿಯದೇ ಮಾತಾಡಿದ್ದು ಸರಿಯಲ್ಲ ಎಂದರು.

Edited By : Nagesh Gaonkar
Kshetra Samachara

Kshetra Samachara

06/10/2021 10:27 pm

Cinque Terre

400

Cinque Terre

0

ಸಂಬಂಧಿತ ಸುದ್ದಿ