ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಧರ್ಮದಿಂದಲೇ ವಿಶ್ವ ಶಾಂತಿ; ಮಹನೀಯರ ಸ್ಮರಣೆಯಿಂದ ಜೀವನ ಪಾವನ"

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಯಲಹಂಕ ಉಪನಗರದ ಪ್ರಮುಖ ರಸ್ತೆಗಳು ಹೆಂಗಸರ ‌ಕಳಶ, ವೀರಗಾರರ ನೃತ್ಯ- ತಾಳಗಳಿಂದ ಕಂಗೊಳಿಸಿತ್ತು. ಮೂವರು ಸಮಾಜ ಸುಧಾರಕರಾದ ಕಾಯಕ ಯೋಗಿ ಬಸವಣ್ಣ, ಜಗದ್ಗುರು ರೇಣುಕಾಚಾರ್ಯ ಹಾಗೂ ತ್ರಿವಿಧ ದಾಸೋಹಿ ಶಿವಕುಮಾರ ಮಹಾಸ್ವಾಮಿಗಳ ಜಯಂತ್ಯುತ್ಸವ ಪ್ರಯುಕ್ತ ಭಾವಚಿತ್ರ ರಥ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಯಲಹಂಕ ಉಪನಗರ ನಿಸರ್ಗ ಮೈದಾನದಲ್ಲಿ ನಡೆದ ತ್ರಿಮೂರ್ತಿಗಳ ಜಯಂತ್ಯುತ್ಸವ‌ಕ್ಕೆ ವೀರಶೈವ ಲಿಂಗಾಯತ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಬಿಎಸ್ ವೈ, ಮನುಷ್ಯನನ್ನು ಮಹದೇವನನ್ನಾಗಿಸಿದ ಮಹನೀಯರನ್ನು ಸ್ಮರಿಸುತ್ತಿರುವ ಉತ್ತಮ ಕೆಲಸ ಮಹಿಳೆಯರಿಂದ ಆಗುತ್ತಿದೆ ಎಂದರು. ಹಾಗೆಯೇ ಈಶ್ವರ ಖಂಡ್ರೆ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದರು.

ಯಲಹಂಕದಲ್ಲಿ ವೀರಶೈವ ಸಮುದಾಯದ ಅಭಿವೃದ್ಧಿಗೆ ಹೆಚ್ವಿನ‌ ಒತ್ತು ನೀಡಲಾಗ್ತಿದೆ. ಸೋಮೇಶ್ವರ ದೇವಸ್ಥಾನ ಅಭಿವೃದ್ಧಿಗೆ 5 ಕೋಟಿ‌ ರೂ. ಖರ್ಚು ಮಾಡಲಾಗಿದೆ. ಜಾತಿ- ಮತ ಬೇಧ ಬಿಟ್ಟು ಸರ್ವ ಜನಾಂಗದ ಅಭಿವೃದ್ಧಿ ನಮ್ಮ ಕ್ಷೇತ್ರದಲ್ಲಿ ಆಗುತ್ತಿದೆ ಎಂದು ಶಾಸಕ‌ ವಿಶ್ವನಾಥ್ ತಿಳಿಸಿದರು.

- ಸುರೇಶ್ ಬಾಬು Public Next ಯಲಹಂಕ

Edited By : Nagesh Gaonkar
PublicNext

PublicNext

29/05/2022 09:46 pm

Cinque Terre

45.71 K

Cinque Terre

0

ಸಂಬಂಧಿತ ಸುದ್ದಿ