ಬೆಂಗಳೂರು: ಮಾನವ ಸಂಘ ಜೀವಿ. ಹೀಗಾಗಿ ಎಲ್ಲರೂ ಒಂದಾಗಿ ಬಾಳಬೇಕು ಎಂದು ಎಲ್ಲ ಧರ್ಮಗಳು ಹೇಳುತ್ತವೆ. ಈ ನಿಟ್ಟಿನಲ್ಲಿ ಕೋಮು ಸೌಹಾರ್ದತೆ ಬೆಳೆಸಲು ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಜಯನಗರ ಮಸಾಜಿದ್ ಫೆಡರೇಶನ್‌ನಿಂದ ಇಫ್ತಿಯಾರ್ ಕೂಟ ಆಯೋಜಿಸಲಾಗಿತ್ತು.
ಈ ಇಫ್ತಿಯಾರ್ ಕೂಟದಲ್ಲಿ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ, ಅವರ ಪುತ್ರಿ, ಶಾಸಕಿ ಸೌಮ್ಯಾ ರೆಡ್ಡಿ, ಡಿಸಿಪಿ ಜೋಶಿ ಶ್ರೀನಾಥ್ ಮಹಾದೇವ್, ತಿಲಕ್‌ನಗರದ ಎಸಿಪಿ ಕರಿ ಬಸವನಗೌಡ, ಕೋರಮಂಗಲದ ಎಸಿಪಿ ಸುಧೀರ್ ಹೆಗ್ಡೆ ಹಾಗೂ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರಿಜ್ವಾನ್ ನವಾಬ್ ಉಪಸ್ಥಿತರಿದ್ದರು. ಈ ವೇಳೆ ಮುಖ್ಯ ಅತಿಥಿಗಳಿಗೆ ಸನ್ಮಾನ ಕೂಡ ಮಾಡಲಾಯಿತು.
PublicNext
24/04/2022 09:22 pm