ರಿಪೋರ್ಟ್- ರಂಜಿತಾಸುನಿಲ್
ಬೆಂಗಳೂರು: ಅಖಿಲ ಕರ್ನಾಟಕ ಶ್ರೀ ವಿ.ಸೋಮಣ್ಣ ಅಭಿಮಾನಿ ಬಳಗದ ವತಿಯಿಂದ ಸುಮನಹಳ್ಳಿ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಅಗತ್ಯ ವಸ್ತುಗಳು ವಿತರಣಾ ಕಾರ್ಯಕ್ರಮ ಮಾಡಲಾಯಿತು. ಅಗತ್ಯ ವಸ್ತುಗಳಾದ ಹಾಸಿಗೆ,ಬೆಡ್ ಶೀಟ್,ಸೋಪ್,ಹಣ್ಣುಗಳು ದಿನಬಳಕೆ ವಸ್ತುಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಅವರು, ಬಡವರಾಗಿ ಹುಟ್ಟಿರಬಹುದು. ಆದರೆ ಬಡವರಾಗಿ ಜೀವನ ಸಾಗಿಸಬಾರದು ಎಂಬ ಉದ್ದೇಶದಿಂದ ನಮ್ಮ ಪ್ರತಿಯೊಂದು ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಸಮಾಜವನ್ನು ಸಮಾಜದ ಮುಖ್ಯವಾಹಿನಿ ತರಬೇಕು ಅವರ ಸಹ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಬೇಕು ಎಂದು ವಸತಿ ಇಲಾಖೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಣ,ಆರೋಗ್ಯ ಪರಿಸರದ ಬಗ್ಗೆ ಗಮನಹರಿಸಿ ಗರ್ಭಿಣಿ ಸ್ತ್ರಿಯರು ಆರೋಗ್ಯ ತಪಾಸಣೆ ಮತ್ತು ಹೆರಿಗೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿತು. ನಮ್ಮ ಕ್ಷೇತ್ರದಲ್ಲಿ ರೆಫರಲ್ ಆಸ್ಪತ್ರೆಯಿಂದ 500 ರೂಪಾಯಿ ವೆಚ್ಚದಲ್ಲಿ ಗರ್ಭಿಣಿ ಸ್ತ್ರಿಯರ ಚಿಕಿತ್ಯೆ,ತಪಾಸಣೆ ಮತ್ತು ಪ್ರಸವ ಮಾಡಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲ ವಾರ್ಡ್ ಗಳಲ್ಲಿ ಸ್ಥಾಪನೆ. ಪ್ರತಿ ವಾರ್ಡ್ ನಲ್ಲಿ ಯೋಗ ಕೇಂದ್ರ,ವ್ಯಾಯಾಮ ಕೇಂದ್ರ ಆರಂಭಿಸಲಾಗಿದೆ ಎಂದರು.
Kshetra Samachara
21/07/2022 05:07 pm