ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಎಂಎಲ್ ಎ ಆಕಾಂಕ್ಷಿಗಳ ನಡುವೆ ಭಾರೀ ಫೈಟ್ ನಡೆಯುತ್ತಿದೆ. ಈಗಾಗ್ಲೆ ಮಾಜಿ ಸಿಎಂ ಸಿದ್ಧರಾಮಯ್ಯ, ಮತ್ತು ಕೆಪಿಸಿಸಿ ಅಧ್ಯಕರ ಜೊತೆ ಗುರುತಿಸಿಕೊಂಡು ಟಿಕೆಟ್ ಫಿಕ್ಸ್ ಎನ್ನುತ್ತಿರುವ ಎಂ.ರಾಜಕುಮಾರ್ ಅವರು ಈಗಾಗ್ಲೆ ಕ್ಷೇತ್ರದಲ್ಲಿ ಕೆಲಸಗಳನ್ನ ಪ್ರಾರಂಭಿಸಿದ್ದಾರೆ.
ಇನ್ನೂ ಯಶವಂತಪುರ ಕ್ಷೇತ್ರದಲ್ಲಿ ಬಾಲರಾಜಗೌಡ ಎಂಬುವವರು ಟಿಕೆಟ್ ಆಕಾಂಕ್ಷಿಯಾಗಿದ್ದು, ಕ್ಷೇತ್ರದಲ್ಲಿ ನಾನು ಈ ಬಾರಿ ಎಂಎಲ್ ಎ ಕ್ಯಾಂಡಿಡೇಟ್ ಅಂತ ಹೇಳಿಕೊಳ್ತಾ ಇದ್ದಾರಂತೆ. ಎಂ.ರಾಜಕುಮಾರ್ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಆಗಿದ್ದು, ಇವರನ್ನ ಬಾಲರಾಜಗೌಡ ಎಂಬುವವರು ಶಕುನಿ ಎಂದು ನಿಂದಿಸಿ, ಏಕ ವಚನದಿಂದ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬೇಡ್ಕರ್ ಸೇನಾ ಸಮಿತಿಯವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಇವರಿಬ್ಬರ ನಡುವೆ ನಡೆಯುತ್ತಿರುವ ಜಟಾಪಟಿ ಈಗಾಗ್ಲೆ ಕೆಪಿಸಿಸಿವರೆಗೂ ಮುಟ್ಟಿದ್ದು, ಜಾತಿಯ ಸಂಘರ್ಷ ಎದುರಾಗುವ ಹಾಗಾಗಿದೆ. ಹಾಗೇ ಈ ಬಾರಿ ಕಾಂಗ್ರೆಸ್ ನಲ್ಲಿ ಎಂಎಲ್ಎ ಟಿಕೆಟ್ ಯಾರ ಪಾಲಾಗುತ್ತೆ ಕಾದು ನೋಡಬೇಕಿದೆ.
ರಂಜಿತಾ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
Kshetra Samachara
27/08/2022 06:47 pm