ಹಿಜಾಬ್ ವಿವಾದ ರಾಜ್ಯದಲ್ಲಿ ಕಿಚ್ಚು ಹೆಚ್ಚಿಸಿದೆ.. ಇದರ ಬೆನ್ನಲ್ಲೇ ಕೊರೊನಾ ಟೈಂ ನಲ್ಲಿ ಅರೆಸ್ಟ್ ಆಗಿದ್ದ ಇಮ್ರಾನ್ ಪಾಷ ಹಚ್ಚುವ ಕೆಲಸ ಮಾಡಿದ್ದಾನೆ.. ನಿನ್ನೆ ಅಲ್ಲಾಹು ಅಕ್ಬರ್ ಎಂದು ಸುದ್ದಿಯಾಗಿದ್ದ ಮಂಡ್ಯ ಯುವತಿ ಮುಸ್ಕಾನ್ ಗೆ ಕರೆ ಮಾಡಿ ಇಮ್ರಾನ್ ಪಾಷ ದೂರು ದಾಖಲಿಸು ಎಂದು ಪ್ರಚೋದಿಸಿದ್ದಾನೆ.. ಅಲ್ಲದೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದ ಹುಡುಗರು ಅಳಬೇಕು ಎಂದು ಯುವತಿ ಫೋನ್ ನಲ್ಲಿ ಮಾತನಾಡಿದ್ದಾಳೆ.. ಸ್ವತಃ ನಮ್ಮ ಕಾಲೇಜು ಪ್ರಿನ್ಸಿಪಾಲ್ ಅವರೇ ಹೇಳಿದ್ದಾರೆ ನಿನ್ನೆ ನಡೆದ ಘಟನೆಗೆ ಹೊರಗಿಂದ ನಾಯಿಗಳು ಬಂದಿದ್ದಾರೆ ಎಂದು ಇಮ್ರಾನ್ ಪಾಷ ಜತೆ ಮಾತನಾಡಿದ್ದಾಳೆ.. ನಿಮಗೇನಾದ್ರೂ ಭಯ, ಆತಂಕ ಇದ್ದರೆ ನಾನಿದ್ದೀನಿ ಎಂದು ಪರೋಕ್ಷವಾಗಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದಾನೆ ಇಮ್ರಾನ್ ಪಾಷ.. ದುರಂತ ಎಂದರೆ ಈ ಸಮಯದಲ್ಲಿ ಬುದ್ಧಿ ಹೇಳಬೇಕಿದ್ದ ಇಮ್ರಾನ್ ವಿದ್ಯಾರ್ಥಿನಿಗೆ ಪ್ರಚೋದನೆ ನೀಡಿದ್ದಾನೆ ಎಂಬುದು ಆಡಿಯೋ ದಲ್ಲಿ ಸ್ಪಷ್ಟವಾಗಿದೆ..
PublicNext
09/02/2022 03:58 pm