ಕಾಂಗ್ರೆಸ್ ಪ್ರತಿಭಟನೆ ವೇಳೆ ನಾಯಕತ್ವದ ವಿಚಾರವಾಗಿ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಗೆ ನೋಟಿಸ್ ನೀಡಬೇಕು ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ.
ಸೋನಿಯಾ ಗಾಂಧಿ ಪರ ಬೆ೦ಗಳೂರಿನಲ್ಲಿ ಪ್ರತಿಭಟಿಸುತ್ತಿದ್ದ ಸಂದರ್ಭ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಜಮೀರ್ ಹೇಳಿಕೆ ನೀಡಿದ್ದು, ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಶಾಸಕ ಜಮೀರ್ ಟಾಂಗ್ ಕೊಟ್ಟಿದ್ದರು.
ನಾಯಕತ್ವದ ವಿಚಾರದಲ್ಲಿ ಜಮೀರ್ ಇಂಥ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಹಾಗಾಗಿ ಅವರಿಗೆ ಚುರುಕು ಮುಟ್ಟಿಸಬೇಕು ಎಂಬ ಒತ್ತಡ ಹಾಕಲಾಗ್ತಿದೆ. ಈ ಸಂಬಂಧ ಪಕ್ಷದ ಕೆಲ ಮುಖಂಡರು ಶಿಸ್ತು ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಮಾಹಿತಿ ಹರಿದಾಡುತ್ತಿದೆ.
ಇತ್ತ ಡಿ.ಕೆ. ಶಿವಕುಮಾರ್, ಬಾಯಿ ಮುಚ್ಚಿಕೊಂಡು ಎಲ್ಲರೂ ಕೆಲಸ ಮಾಡಬೇಕು. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿ. ಐ ಆಮ್ ಟೆಲ್ಲಿಂಗ್ ಎವರಿ ವನ್. ನಿಮ್ಮ ನಿಮ್ಮ ಸಮುದಾಯಗಳನ್ನು ಸೆಳೆಯಿರಿ. ವ್ಯಕ್ತಿ ಪೂಜೆ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿ . ಎಲ್ಲ 224 ಎಂಎಲ್ ಎಗಳು ಕೂಡ ಸಿಎಂ ಅಭ್ಯರ್ಥಿಗಳೇ ಎಂದಿದ್ದಾರೆ.
ವರದಿ: ಗೀತಾಂಜಲಿ
PublicNext
23/07/2022 12:58 pm