ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಅದರಲ್ಲೂ ಪಂಚನದಿಗಳ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಭೇಟಿ ಪರಿಶೀಲನೆ ನಡೆಸಿದರು.
ಚಿಕ್ಕಬಳ್ಳಾಪುರದ ಅರಸನಹಳ್ಳಿ ಗ್ರಾಮದ ರೈತ ನಂಜೇಗೌಡ ತೋಟಕ್ಕೆ ಎಂಟಿಬಿ ಭೇಟಿ ಬೆಳೆನಾಶದ ಬಗ್ಗೆ ಮರುಕ ವ್ಯಕ್ತಪಡಿಸಿದರು. ಮಳೆ ಗಾಳಿಗೆ ಚನ್ನಾಗಿ ಫಸಲು ಬಿಟ್ಟು ಕಟಾವಾಗುವಷ್ಟರಲ್ಲಿ ದ್ರಾಕ್ಷಿ ತೋಟ ಕುಸಿದುಬಿದ್ದಿದೆ. ಇದೇ ವೇಳೆ ರೈತ ನಂಜೇಗೌಡರ ತೋಟದಲ್ಲಿ ಹೆಚ್ಚು ಬೆಳೆ ನಾಶವಾಗಿತ್ತು. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ನೀಡಿ ಸಾಂತ್ವನ ಹೇಳಿದರು.
Kshetra Samachara
23/05/2022 09:08 am