ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆಯಿಂದ ಏರ್ಪೋರ್ಟ್ ರಸ್ತೆ ಪ್ರಯಾಣಿಕರಿಗೆ ಎರಡು ಗಂಟೆ ನರಕಯಾತ್ರೆ

ಕಾಂಗ್ರೆಸ್ ಬೆಂಬಲಿಗರ 75ನೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ದೇವನಹಳ್ಳಿಯ ಏರ್ಪೋಟ್ ಟೋಲ್ ಪ್ಲಾಜಾದಿಂದ ಬ್ಯಾಟರಾಯನಪುರಕ್ಕೆ ಪಾದಯಾತ್ರೆ ನಡೆಸಿದರು.

ಸಾವಿರಾರು ಸಂಖ್ಯೆಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರಿಂದ ಏರ್ಪೋರ್ಟ್ ರಸ್ತೆಲಿ ಕಂಪ್ಲೀಟ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಡಿಜೆ, ಡೊಳ್ಳು ಕುಣಿತ ಮತ್ತು ತಮಟೆಗಳೊಂದಿಗೆ ಪಾದಯಾತ್ರೆ ಮುಂದುವರೆದಿತ್ತು. ಹೆಚ್ಚಿನ ಸಂಖ್ಯೆಲಿ ಜನ ಸೇರಿದ್ದರಿಂದ 3 ಕಿಲೊ ಮೀಟರ್ ಗೂ ಅಧಿಕ ದೂರ ಟ್ರಾಫಿಕ್ ಜಾಮ್ ಜನರಿಗೆ ತಲೆ ನೋವು ತಂದಿತ್ತು.

ಟ್ರಾಫಿಕ್ ಜಾಮ್ ಸಲುವಾಗಿ ಏರ್ಪೋಟ್ ನಿಂದ ಬೆಂಗಳೂರಿಗೆ ಹೋಗುವ & ಬರುವ ವಾಹನ ಸವಾರರು ತೀವ್ರವಾಗಿ ಪರದಾಡಿದರು.

ಪಾದಯಾತ್ರೆಯಲ್ಲಿ ಶಾಸಕ ಕೃಷ್ಣ ಬೈರೆಗೌಡ, ಬೆಂಗಳೂರು ನಗರ MLC ರವಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

09/08/2022 11:03 pm

Cinque Terre

1.92 K

Cinque Terre

0

ಸಂಬಂಧಿತ ಸುದ್ದಿ