ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದ್ವೇಷ ರಾಜಕಾರಣಕ್ಕೆ ಬಲಿಯಾದ ತೂಬಗೆರೆ ಪಂಚಾಯತಿ

ದೊಡ್ಡಬಳ್ಳಾಪುರ: ತೂಬಗೆರೆ ಪಂಚಾಯಿತಿಯ ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿ ಮರೆತು ಸದಾ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಪರಿಣಾಮ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿವೆ. ಇದರಿಂದ ಬೇಸತ್ತ ಗ್ರಾಮದ ಯುವಕರು ಪಂಚಾಯಿತಿ ಕಾರ್ಯಾಲಯ ಮುತ್ತಿಗೆ ಹಾಕಿ ಪಂಚಾಯಿತಿ ವಿಸರ್ಜಿಸುವಂತೆ ಒತ್ತಾಯಿಸಿದರು.

ಪ್ರಸ್ತುತ ಪಂಚಾಯತ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಾಗಿದೆ. ಆದರೆ ಒಂದೂವರೆ ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳೇ ಮರಿಚಿಕೆಯಾಗಿದೆ. ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯುತ್ತಿಲ್ಲ. ಪಂಚಾಯತ್ ಸಿಂಬ್ಬದಿಗೆ ಸಂಬಳ ಕೊಡುತ್ತಿಲ್ಲ, ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ಅನುದಾನ ಕೊಡುವಲ್ಲಿ ವಿಫಲವಾಗಿದೆ. ಇ-ಖಾತೆ ಮಾಡಿಸಲು ಸಾರ್ವಜನಿಕರು ನಿತ್ಯ ಕಚೇರಿ ಅಲೆಯುವಂತಾಗಿದೆ. ಅರ್ಜಿಗಳನ್ನ ತಕ್ಷಣವೇ ವಿಲೇವಾರಿ ಮಾಡುತ್ತಿಲ್ಲ, ಪಂಚಾಯತಿ ಇದ್ದು ಇಲ್ಲದಂತ್ತಿದೆ. ಇದರಿಂದ ಬೇಸತ್ತ ಯುವಕರು ಪಂಚಾಯತ್ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯತಿ ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿ ಮರೆತು ಸದಾ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಪರಸ್ಪರ ದ್ವೇಷ ರಾಜಕಾರಣ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳು ಆಗದಂತೆ ಮಾಡುತ್ತಿದ್ದಾರೆ. ಸಮರ್ಪಕವಾಗಿ ಆಡಳಿತ ನಡೆಸದ ತೂಬಗೆರೆ ಪಂಚಾಯತಿಯನ್ನು ವಿಸರ್ಜಸಬೇಂದು ಯುವಕರು ಒತ್ತಾಯಿಸಿದರು.

Edited By : Somashekar
Kshetra Samachara

Kshetra Samachara

12/07/2022 07:44 pm

Cinque Terre

3.01 K

Cinque Terre

0

ಸಂಬಂಧಿತ ಸುದ್ದಿ