ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಧಾನಿ ನರೇಂದ್ರ ‌ಮೋದಿ ಬ್ಯಾನರ್‌ಗೆ ಕರವೇ ಮಸಿ ಬಳಿದಿದ್ದು ಏಕೆ ?

ಬೆಂಗಳೂರು: ಪ್ರಧಾನಿ ಮೋದಿ ಗಮನ ಸೆಳೆಯಲು ಹಿಂದಿ ಭಾಷೆಯಲ್ಲಿ ಬ್ಯಾನರ್ ಹಾಕಿ ಪ್ರಚಾರ ಗಿಟ್ಟಿಸಲು ಯತ್ನಿಸಿದ ಸಚಿವ ಮುನಿರತ್ನ ಬ್ಯಾನರ್ ಗಳಿಗೆ ಕರವೇ ಕಾರ್ಯಕರ್ತರು ಮಸಿ ಬಳಿದು ಧ್ವಂಸಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಹಿಂದಿ ಭಾಷೆ ಬಳಿಸಿ ರಸ್ತೆಯುದ್ದಕ್ಕೂ ಸಚಿವ ಮುನಿರತ್ನ ಹಾಕಿಸಿದ್ದ ಹಿಂದಿ ಬ್ಯಾನರ್‌ಗಳನ್ನು ಮೋದಿ ನೋಡುವ ಮುನ್ನವೇ ಕನ್ನಡ ಪರ ಸಂಘಟನೆಗಳು ಕಿತ್ತೆಸೆದಿವೆ.

ವಿಷಯ ತಿಳಿದ ಟಿ.ಎ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಧರ್ಮರಾಜ್ ಮತ್ತು ಬೆಂಬಲಿಗರು ಮೈಸೂರು ರಸ್ತೆಯಲ್ಲಿ ಮುನಿರತ್ನ ಬ್ಯಾನರ್ ತೆರವು ಗೊಳಿಸಲು ಯತ್ನಿಸಿದ್ದಾರೆ.

ಕನ್ನಡ ವಿರೋಧಿ ಮುನಿರತ್ನ ಎಂದು ಬೆಂಬಲಿಗರ ವಿರುದ್ಧ ಧಿಕ್ಕಾರ ಕೂಗಿದ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಇದರ ಮಧ್ಯೆಯೂ ಹಿಂದಿ ಬ್ಯಾನರ್ ಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Edited By : Nagesh Gaonkar
PublicNext

PublicNext

21/06/2022 10:20 pm

Cinque Terre

39.69 K

Cinque Terre

3

ಸಂಬಂಧಿತ ಸುದ್ದಿ