ಬೆಂಗಳೂರು: ಹೈಕೋರ್ಟ್ ತ್ರಿಸದಸ್ಯ ಪೀಠವು 129 ಪುಟಗಳ ತೀರ್ಪು ನೀಡಿದೆ. ತೀರ್ಪಿನಲ್ಲಿ ನಾಲ್ಕು ಪ್ರಶ್ನೆಗಳನ್ನ ಗಂಭೀರವಾಗಿ ಪರಿಗಣಿಸಲಾಗಿದೆ.
ಎರಡನೇ ಪ್ರಶ್ನೆಗೆ ಉತ್ತರ ನೀಡಿರುವ ಹೈಕೋರ್ಟ್ ಪೀಠ.. ಸಿಡಿಸಿ ವಸ್ತ್ರ ಸಂಹಿತೆ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಲ್ಲ. ಸರ್ಕಾರದ ಸಮವಸ್ತ್ರ ಸಂಹಿತೆ ಕಾನೂನು ಬದ್ದವಾಗಿಯೇ ಇದೆ. ಇದನ್ನು ವಿದ್ಯಾರ್ಥಿಗಳು ಆಕ್ಷೇಪ ಮಾಡಬಾರದು ಎಂದಿದ್ದಾರೆ..
ಎರಡು ಕಡೆಯ ವಾದ ಪ್ರತಿವಾದ ಕೇಳಿದ ಬಳಿಕ ಮೊದಲ ಪ್ರಶ್ನೆಗೆ ಉತ್ತರ ನೀಡಿದ ಪೀಠ, ಮುಸ್ಲಿಂ ಮಹಿಳೆ ಹಿಜಾಬ್ ಧರಿಸುವುದು ಅತ್ಯಗತ್ಯ ಆಚರಣೆಯಲ್ಲ. ಇಸ್ಲಾಂ ನಂಬಿಕೆಯ ಪ್ರಕಾರ ಹಿಜಾಬ್ ಧಾರ್ಮಿಕ ಆಚರಣೆಯೂ ಅಲ್ಲ.
ನಾಲ್ಕನೇ ಪ್ರಶ್ನೆಗೆ ಹೈಕೋರ್ಟ್ ಪೀಠ ಉತ್ತರ. ಉಡುಪಿ ಕಾಲೇಜಿನ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳುವ ವಿಚಾರ, ಈ ಅರ್ಜಿಗಳು ಇಲ್ಲಿ ಉರ್ಜಿತವಾಗುವುದಿಲ್ಲ. ಮೂರನೇ ಪ್ರಶ್ನೆಗೆ ಉತ್ತರ ನೀಡಿರುವ ಹೈಕೋರ್ಟ್ ಪೀಠ, ಸರ್ಕಾರ ಫೆ.5 ರ ಆದೇಶ ಕಾನೂನು ಬದ್ದವಾಗಿಯೇ ಇದೆ.. ಸಂವಿಧಾನದಲ್ಲಿ ಸರ್ಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ ಎಂದಿದ್ದಾರೆ..
PublicNext
15/03/2022 02:04 pm