ಬೆಂಗಳೂರು: ನಗರದ ಹೃದಯ ಭಾಗದಲ್ಲಿ ಇಂದು ಕಾಂಗ್ರೆಸ್ ಪಾದಯಾತ್ರೆ ಮತ್ತು ಸಮಾವೇಶ ನಡೆಯುತ್ತಿದೆ. ಈ ಹಿನ್ನೆಲೆ ನಗರದ ಕೇಂದ್ರ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಈ ಹಿನ್ನೆಲೆ ಸಂಚಾರಿ ಪೊಲೀಸರು ಒಂದಷ್ಟು ಬದಲಿ ಮಾರ್ಗಗಳನ್ನು ವಾಹನ ಸವಾರರಿಗೆ ಸೂಚಿಸಿದ್ದಾರೆ.
ಮಲ್ಲೇಶ್ವರ, ಮೇಕ್ರಿ ಸರ್ಕಲ್, ಮೆಜೆಸ್ಟಿಕ್ ಸುತ್ತಲೂ ಟ್ರಾಫಿಕ್ ಜಾಮ್ ಉಂಟಾಗುವ ಸಾದ್ಯತೆಯಿದೆ. ಏರ್‌ಪೊರ್ಟ್ ಕಡೆಯಿಂದ ಬರುವ ವಾಹನಗಳು ಹೆಬ್ಬಾಳ ಔಟರ್ ರಿಂಗ್ ರಸ್ತೆ ಹಾಗೂ ಜೆ.ಸಿ ನಗರ ರಸ್ತೆಯಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿದ್ದು ಪಾದಯಾತ್ರೆ ಸಮಯದಲ್ಲಿ ಈ ಮಾರ್ಗದಲ್ಲಿ ಟ್ರಾಫಿಕ್ ಅಗುವ ಸಾದ್ಯತೆ ಇದೆ. ಪಾದಯಾತ್ರೆ ರಸ್ತೆ ಬಿಟ್ಟು ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಆದಷ್ಟು ಬದಲಿ ಮಾರ್ಗ ಬಳಸಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಪಾದಯಾತ್ರೆ ಸಾಗಿದಂತೆ ಹಿಂಬದಿಯಿಂದ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ನಾಯಕರ ಹೆಚ್ಚಿನ ವಾಹನಗಳು ರಸ್ತೆಗೆ ತರದಂತೆ ಪೊಲೀಸರು ಸೂಚಿಸಿದ್ದಾರೆ.
PublicNext
03/03/2022 01:40 pm