ಆನೇಕಲ್: ಚುನಾವಣಾ ವೆಚ್ಚ ದಾಖಲೆ ಸಲ್ಲಿಸದಿರುವ ಕಾರಣದಿಂದಾಗಿ ಆನೇಕಲ್ ಪುರಸಭೆಯ 12 ಮಂದಿಯನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ!
ಆನೇಕಲ್ ಪುರಸಭೆಗೆ ಸಾರ್ವತ್ರಿಕ ಚುನಾವಣೆ 2019ರಲ್ಲಿ ನಡೆದಿದ್ದು, ಗೆದ್ದ ಅಭ್ಯರ್ಥಿಗಳು 30 ದಿನಗಳ ಒಳಗಾಗಿ ಚುನಾವಣಾ ಆಯೋಗಕ್ಕೆ ಖರ್ಚು- ವೆಚ್ಚದ ದಾಖಲೆ ಸಲ್ಲಿಸಬೇಕಾಗಿತ್ತು. ಆದರೆ, ಈ ಅಭ್ಯರ್ಥಿಗಳು ದಾಖಲೆ ಸಲ್ಲಿಸಿಲ್ಲ! ಹೀಗಾಗಿ ಇಂದು ಈ 12 ಮಂದಿಯನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಇನ್ನು, ಚುನಾವಣೆಯಲ್ಲಿ 12 ಜನರ ಪೈಕಿ 9 ಮಂದಿ ಸೋತ ಅಭ್ಯರ್ಥಿಗಳಿದ್ದು, ಮೂವರು ಅಭ್ಯರ್ಥಿಗಳು ಹಾಲಿ ಸದಸ್ಯರಾಗಿದ್ದು ವಾರ್ಡ್ ನಂ. 27 ಶ್ರೀನಿವಾಸ್ ,14 ಹೇಮಲತಾ, 16 ಲಲಿತಾರನ್ನು ರಾಜ್ಯ ಚುನಾವಣಾ ಆಯೋಗ ಪುರಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆನೇಕಲ್ ದಂಡಾಧಿಕಾರಿ ದಿನೇಶ್, ಈಗಾಗಲೇ ರಾಜ್ಯ ಚುನಾವಣಾ ಆಯೋಗ 12 ಮಂದಿಯನ್ನು ಸದಸ್ಯತ್ವ ಸ್ಥಾನಕ್ಕೆ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಆದೇಶದ ಪ್ರತಿ ನನ್ನ ಗಮನಕ್ಕೂ ಬಂದಿದೆ. ಮುಂದಿನ ದಿನಗಳಲ್ಲಿ ಈ ಅನರ್ಹಗೊಳಿಸಿದ ವಾರ್ಡ್ ಸ್ಥಳಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಅಭ್ಯರ್ಥಿಗಳಲ್ಲಿ ಗೊಂದಲ ಇದ್ದ ಸಂದರ್ಭ ಲೋಪ ಕಂಡುಬಂದಲ್ಲಿ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ ಎಂದರು.
Kshetra Samachara
03/02/2022 07:50 pm