ಬೆಂಗಳೂರು ದಕ್ಷಿಣ : ಕ್ವಿಟ್ ಹೆಟ್ರಿಡ್ ತೇಜಸ್ವಿ ಸೂರ್ಯ ಅಭಿಯಾನಕ್ಕೆ ಕೆಪಿಸಿಸಿ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ನೇತೃತ್ವದಲ್ಲಿ ಚಾಲನೆ ದೊರೆತಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಕಲ್ಲು ಹೊಡೆಯುತ್ತಿದ್ದೆ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿರುದ್ಧ ಡಾ.ಶಂಕರ್ ಗುಹಾ ದ್ವಾರಕನಾಥ್ ವಿರೋಧಿಸಿ ದ್ವೇಷ ಬಿಡಿ ಸಂಸದ ತೇಜಸ್ವಿ ಸೂರ್ಯ ಅಭಿಯಾನ ಆರಂಭಿಸಿದ್ದಾರೆ.
ಶುಭಕೃತ್ ನಾಮ ಸಂವತ್ಸರ ಶ್ರಾವಣ ಮಾಸದಲ್ಲೊ ಪಂಚ ದುರ್ಗಾ ಮಹಾಪೂಜೆಯನ್ನು ದ್ವಾರಕನಾಥ್ ರವರ ಕಚೇರಿಯಲ್ಲಿ ಇಂದು ನಡೆಯಿತು.
ಬಸವನಗುಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಂಸದರ ಹೇಳಿಕೆಯಿಂದ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಕ್ವಿಟ್ ಹೆಟ್ರಿಡ್ ತೇಜಸ್ವಿ ಸೂರ್ಯ ಅಭಿಯಾನ ನಡೆಸುತ್ತಿದ್ದಾರೆ.
ಪೂಜೆಯ ಪ್ರಸಾದವನ್ನು ಸಂಸದರಿಗೆ ಕಳುಹಿಸಿಕೊಡಲು ಮುಂದಾದಾಗ ಪೊಲೀಸರು ಕಿರಿಕ್ ಮಾಡಿದ್ದಾರೆ. ಹೊಯ್ಸಳದಲ್ಲಿ ಪ್ರಸಾದವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ದ್ವಾರಕನಾಥ್ ರವರು ಆಕ್ರೋಶ ಹೊರಹಾಕಿದ್ದಾರೆ.
PublicNext
09/08/2022 06:57 pm