ದೇವನಹಳ್ಳಿ: ಬೆಂಗಳೂರಿನ ದೇವನಹಳ್ಳಿಯ ಚನ್ನರಾಯಪಟ್ಟಣ ರೈತರ ಹೋರಾಟದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯ ಡಿ.ಸಿ ಕಛೇರಿ ಬಳಿ ಪ್ರತಿಭಟನೆ ನಡೆಸಿ, ಕೃಷಿ ಭೂಮಿ ಸ್ವಾಧೀನ ಕೈಬಿಡಬೇಕು ಮತ್ತು ರೈತರ ಮೇಲೆ ದಾಖಲಾಗಿರುವ ಎಫ್‌ಐಆರ್ ವಿರೋಧಿಸಿ ಪ್ರತಿಭಟನೆ ನಡೆಯಲಾಗ್ತಿದೆ.
ಇನ್ನು ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಜೊತೆ ದೇವನಹಳ್ಳಿ ರೈತ ಹೋರಾಟಗಾರು, ದೇವನಹಳ್ಳಿಯ ಜೆಡಿಎಸ್ ನಾಯಕರು ಮತ್ತು ನೂರಾರು ಸಂಖ್ಯೆಯಲ್ಲಿ ರೈತರು ಜೆಡಿಎಸ್ ಮುಖಂಡರು ಭಾಗಿಯಾಗಿ ಸಾಥ್ ನೀಡಿದರು.
ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ ಸದನದಲ್ಲಿ ಚನ್ನರಾಯಪಟ್ಟಣ ರೈತರ ಪರ ಹೋರಾಟ ನಡೆಸುವುದಾಗಿ ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಬ್ಬ ಕೈಗಾರಿಕಾ ಮಂತ್ರಿ ಜೈಲಿಗೋದ. ಈಗ ಮತ್ತಿನ್ಯಾರು ಹೋಗಬೇಕೊ. ಸೂಕ್ತ ತನಿಖೆ ನಡೆದರೆ ಈಗಿರುವ ಜೈಲುಗಳು ಸಾಜಾಗುವುದಿಲ್ಲ. ಹತ್ತು ಹದಿನೈದು ಜೈಲು ಬೇಕಾಗಬಹುದು ಎಂದು ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
PublicNext
25/08/2022 04:49 pm