ವರದಿ ಪ್ರವೀಣ್ ರಾವ್
ಬೆಂಗಳೂರು: ಬಿಬಿಎಂಪಿಯ 243 ವಾಡ್೯ಗಳಿಗೆ ಮೀಸಲಾತಿ ಪ್ರಕಟಿಸಿ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ತೀವೃ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇವತ್ತು ನೇರವಾಗಿ ವಿಕಾಸ ಸೌಧದ ನಗರಾಭಿವೃದ್ಧಿ ಕಚೇರಿಗೆ ನುಗ್ಗಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ..
ಸರ್ಕಾರ ಪ್ರಕಟಿಸಿದ ಮೀಸಲಾತಿಗೆ ಯಾವುದೇ ಗೊತ್ತು ಗುರಿ ಇಲ್ಲಾ.. ಮನಸ್ಸಿಗೆ ಬಂದ ಹಾಗೆ ಮಾಡಿದ್ದಾರೆ. ವಾಡ್೯ ಪುನರ್ ವಿಂಗಡಣೆಯನ್ನೂ ಸಂಪೂರ್ಣ ವಾಗಿ ಅವೈಜ್ಞಾನಿಕವಾಗಿ ಮಾಡಿದ್ದಾರೆ ಈಗ ಮೀಸಲಾತಿ ಪಟ್ಟಿಯನ್ನೂ ಈ ರೀತಿ ಮಾಡಿಹಾಕಿದ್ದಾರೆ ಎಂದೆಲ್ಲಾ ಆರೋಪಿಸಿದ ಕಾಂಗ್ರೆಸ್ ನಾಯಕರು..
ಇಂದು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ಕರೆದು ಹೋರಾಟದ ಮುನ್ನೆಚ್ಚರಿಕೆ ಕೊಟ್ಟಿದ್ದರು..
ಮಧ್ಯಾಹ್ನ ಇದ್ದಕ್ಕಿದ್ದ ಹಾಗೆಯೇ ವಿಕಾಸ ಸೌಧದದಲ್ಲಿರು ನಗರಾಭಿವೃದ್ಧಿ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರ ಕಚೇರಿಗೆ ನುಗ್ಗಿದ ಕಾಂಗ್ರೆಸ್ ತಂಡ ಕಚೇರಿಗೆ ಬಿಜೆಪಿ ಕಚೇರಿ ಎಂದು ಬೋಡ್೯ ಹಾಕಲು ಮುಂದಾಯಿತು..
ರಾಮಲಿಂಗಾರೆಡ್ಡಿ,ದಿನೇಶ್ ಗುಂಡುರಾವ್ ಜಮೀರ್ ಅಹ್ಮದ್,ಉಗ್ರಪ್ಪ, ರೇವಣ್ಣ, ಮಂಜುನಾಥರೆಡ್ಡಿ ಸೇರಿದಂತೆ ಹಲವು ಮುಖಂಡರು ಇದರಲ್ಲಿ ಪಾಲ್ಗೊಂಡಿದ್ದರು.. ಪೊಲೀಸ್ ರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು...
PublicNext
05/08/2022 07:08 pm