ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಜಿಲ್ಲೆಯ ಮದ್ಯಭಾಗದ ಕೇಂದ್ರಸ್ಥಳ. ಆದ್ದರಿಂದ ಸರ್ಕಾರ ದೇವನಹಳ್ಳಿಯ ಬೀರಸಂದ್ರದಲ್ಲಿ ಜಿಲ್ಲಾಕೇಂದ್ರ ಸ್ಥಾಪಿಸಲಾಗಿದೆ. ದೇವನಹಳ್ಳಿಯನ್ನು ಜಿಲ್ಲೆಯ ಜಿಲ್ಲಾ ಕೇಂದ್ರ ಎಂದು ಸರ್ಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಕಳೆದ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನ ಉಸ್ತುವಾರಿ ಸಚಿವ ಸುಧಾಕರ್ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರ ಎಂದು ಘೋಷಿಸಿ, ತಿಂಗಳೊಳಗೆ ಸರ್ಕಾರ ಅಧಿಕೃತ ಮುದ್ರೆ ಒತ್ತಲಿದೆ ಎಂದು ತಿಳಿಸಿದ್ದರು. ಅಂದಿನಿಂದ ಇಂದಿನವರೆಗೂ ದೊಡ್ಡಬಳ್ಳಾಪುರದ ಜನತೆ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.
ಇದರ ಬಗ್ಗೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿ, ದೇವನಹಳ್ಳಿಯನ್ನು ಜಿಲ್ಲಾವನ್ನಾಗಿ ಘೋಷಿಸಿದ್ದು, ಯಾವ ಕಾರಣಕ್ಕೆ ಬದಲಾಗಲ್ಲ ಎಂದು ಸ್ಪಷ್ಟಪಡಿಸಿದರು..
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
Kshetra Samachara
09/09/2022 10:51 am