ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳ ಕೆರೆ ಮಣ್ಣು, ನೀರು ಸಂಗ್ರಹಿಸಿ ಥಿಮ್ ಪಾರ್ಕ್ ನಿರ್ಮಾಣ; ಸಿಎಂ ಬೊಮ್ಮಾಯಿ

ದೇವನಹಳ್ಳಿ: ದೇವನಹಳ್ಳಿ ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ಮುಂದೆ 20 ಕೋಟಿ ರೂ. ವೆಚ್ಚದ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

45 ದಿನದ ಅಭಿಯಾನದ ಮೂಲಕ 31 ಜಿಲ್ಲೆಗಳಲ್ಲಿ ಕೆಂಪೇಗೌಡ ಸಾಕ್ಷಚಿತ್ರ ಯಾತ್ರೆ ನಡೆಯಲಿದೆ. ಎಲ್ಲಾ ಜಿಲ್ಲೆಗಳ ಕೆರೆಮಣ್ಣು ಸಂಗ್ರಹಿಸಿ ಥಿಮ್ ಪಾರ್ಕ್‌ಗೆ ಸಮರ್ಪಿಸಲಾಗುವುದು. 108 ಅಡಿಗಳ ಕೆಂಪೇಗೌಡ ಪ್ರತಿಮೆಯು ಪ್ರಗತಿಯನ್ನು ಸಾರುವ ವಿಶಿಷ್ಟ ಅಭಿಯಾನ ಇದಾಗಿದೆ ಎಂದು ತಿಳಿಸಿದರು.

ಕೆಂಪೇಗೌಡರ ನೆನಪನ್ನು ಶಾಶ್ವತಗೊಳಿಸಲು ಸರ್ಕಾರ ಮುಂದಾಗಿದೆ. ಇನ್ನೂ ಇಡೀ ನಾಡಿನ ಜನತೆ ಏಕತೆಯ ಭಾವದಲ್ಲಿ ಒಗ್ಗೂಡಿಸಲು ಕೆಂಪೇಗೌಡರ ಸಾಕ್ಷ್ಯರಥ ಅಭಿಯಾನ ನಡೆಯಲಿದೆ. ಕೆಂಪೇಗೌಡರು ನಗರ ಕಟ್ಟಲಿಲ್ಲ, ನಾಗರೀಕತೆ ಕಟ್ಟಿ ಖ್ಯಾತಿ ಪಡೆದವರು. ಇಂತಹ ಮಹಾನ್ ವ್ಯಕ್ತಿ ಕೇವಲ ನಗರಕ್ಕೆ ಸೀಮಿತ ಆಗಬಾರದು. ವಿಶ್ವದ ಭೂಪಟದಲ್ಲಿ ಎತ್ತರಕ್ಕೆ ಕೊಂಡೊಯ್ಯಬೇಕು. ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಬಂದು ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಿಎಂ ತಿಳಿಸಿದರು.

ದೇಶ-ವಿದೇಶಗಳಿಂದ ಬೆಂಗಳೂರಿಗೆ ಬರುವರಿಗೆ ನಮ್ಮ ನಾಡಿನ ವೈಭವದ ಇತಿಹಾಸ ತಿಳಿಯಬೇಕು ಎನ್ನುವ ದೃಷ್ಟಿಯಿಂದ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲಾಗಿದೆ. ಕೆಂಪೇಗೌಡ ಪ್ರತಿಮೆ ಪ್ರಗತಿಯಾಗಿ ಪ್ರಜ್ವಲಿಸಲಿ.

Edited By :
PublicNext

PublicNext

02/09/2022 10:29 am

Cinque Terre

32.75 K

Cinque Terre

1

ಸಂಬಂಧಿತ ಸುದ್ದಿ