ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಲ್ ಇಡಿ ಬೀದಿದೀಪ ಅಳವಡಿಕೆ; ಸಚಿವ ಸೋಮಶೇಖರ್ ಚಾಲನೆ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳ ವಾರ್ಡ್ ವ್ಯಾಪ್ತಿಯ ಒಂದರಿಂದ 9 ಬ್ಲಾಕ್ ಗಳಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲಾಯಿತು. ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ಕತ್ತಲಿನಿಂದ ಬೆಳಕಿನೆಡೆಗೆ ಎಂಬಂತೆ ಕೆಲ ಬಡಾವಣೆಗಳ ವ್ಯಾಪ್ತಿಯಲ್ಲಿ ಹೆಚ್ಚು ಬೆಳಕನ್ನು ಚೆಲ್ಲುವಂತಹ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡುಗಳಲ್ಲಿಯೂ ಎಲ್‌ ಇಡಿ ಬೀದಿದೀಪಗಳನ್ನು ಅಳವಡಿಸಲು ಚಾಲನೆ ನೀಡಲಾಗಿದೆ.

ಈ ಸಂದರ್ಭ ಉಲ್ಲಾಳ ವಾರ್ಡ್ ಬಿಜೆಪಿ ಮುಖಂಡ ಅನಿಲ್ ಕುಮಾರ್, ಮಾಜಿ ಪಾಲಿಕೆ ಸದಸ್ಯ ರಾಜಣ್ಣ, ವಾರ್ಡ್ ಅಧ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

-ರಂಜಿತಾ ಸುನಿಲ್, ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Manjunath H D
Kshetra Samachara

Kshetra Samachara

04/08/2022 10:46 pm

Cinque Terre

1.39 K

Cinque Terre

1

ಸಂಬಂಧಿತ ಸುದ್ದಿ