ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೂ ಮುನ್ನ ಯಶವಂತಪುರ ವಿಧಾನಸಭಾ ಕ್ಷೇತ್ರದ ಹಲವು ರಸ್ತೆಗಳಿಗೆ ಡಾಂಬರಿಕರಣ ಮಾಡಲಾಗಿತ್ತು. ಹೀಗೆ ಹಾಕಿದ ಡಾಂಬರು ವಾರದಲ್ಲೇ ಕಿತ್ತು ಹೋಗಿ ಹೊಂಡಾಗುಂಡಿಗಳಾಗಿದ್ದು, ಕಳಪೆ ಕಾಮಗಾರಿ ಎಂದು ಸಾರಿ ಸಾರಿ ಹೇಳ್ತಿದೆ! ಡಾಂಬರುಮಯವಾದ ರಸ್ತೆಗಳಿಗೆ ಬಿಬಿಎಂಪಿ 23 ಕೋಟಿ ರೂ. ವ್ಯಯಿಸಿದೆ ಎಂಬ ಮಾಹಿತಿಯಿದೆ.
23 ಕೋಟಿ ವೆಚ್ಚದಲ್ಲಿ ರೆಡಿಯಾದ ರಸ್ತೆಗಳು ಕೆಲವೇ ಕೆಲವು ದಿನಗಳಲ್ಲೇ ಕಿತ್ತು ಹೋಗುವುದು ಅಂದ್ರೆ...! ಅದು ಯಾವ ಮಟ್ಟದ ಕಳಪೆ ಕಾಮಗಾರಿ? ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೂ ಕೆಲವರು ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ದೂರು ನೀಡಿದ ನಂತರ ಪ್ರಧಾನಿ ಕಾರ್ಯಾಲಯ ಗಮನ ಹರಿಸಿದ್ಧು, ಈ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಅವರು ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.
ವರದಿ: ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
24/06/2022 10:50 pm