ಬೆಂಗಳೂರು: ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಲೆ ಸಂಸದ ತೇಜಸ್ವಿ ಸೂರ್ಯ ಸಿಟ್ಟಾದ ಪ್ರಸಂಗ ಸಿಎಂ ಸಿಟಿ ರೌಂಡ್ಸ್‌ನಲ್ಲಿ ನಡೆಯಿತು. ಬೈರಸಂದ್ರ ಕೆರೆ ಅಭಿವೃದ್ಧಿ ವೀಕ್ಷಣೆ ವೇಳೆ ಎಲೆಕ್ಟ್ರಿಕ್ ಕಾರಿನಲ್ಲಿ ಕುಳಿತು ಸಿಎಂ ಬಸವರಾಜ್ ಬೊಮ್ಮಾಯಿ ಶಾಸಕರು, ಸಚಿವ ಆರ್.ಅಶೋಕ್ ಸಂಸದರು ತೆರಳಿದರು. ಈ ಸಂದರ್ಭದಲ್ಲಿ ಸಿಎಂ ಹಿಂಬದಿ ಕೂರ ಬೇಕಿದ್ದ ಸಂಸದ ತೇಜಸ್ವಿ ಸೂರ್ಯಗೆ ಜಾಗ ನೀಡದೆ ಮಾಜಿ ಮೇಯರ್ ಗಂಗಾಂಬಿಕೆ ಕುಳಿತುಕೊಂಡರು. ಇದರಿಂದ ಇರಿಸು-ಮುರಿಸಿಗೆ ಒಳಗಾದ ಸಂಸದ ತೇಜಸ್ವಿ ಸೂರ್ಯ ಕೆಲ ಸಮಯ ಸಿಡಿಮಿಡಿಗೊಂಡ್ರು.
PublicNext
15/06/2022 04:32 pm