ಆನೇಕಲ್ : ರಸ್ತೆಗುಂಡಿಗಳ ಬಗ್ಗೆ ಖ್ಯಾತ ಉದ್ಯಮಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಷಾ ಉತ್ತಮ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಸರ್ಕಾರ ಯಾಕೆ !?? ಬಸ್ ಡಿಪೋ ವಸತಿ ಗೃಹಗಳನ್ನು ನಿರ್ವಹಿಸಬೇಕಿತ್ತು. ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸರ್ಜಾಪುರ ಸುತ್ತಮುತ್ತಲಿನ ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕಿರಣ್ ಮಜುಂದಾರ್ ಶಾ ಅವರು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ. ಹುಸ್ಕೂರು-ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಕೆಟ್ಟು ಹೋಗಿದೆ ಸ್ಥಳೀಯ ಶಾಸಕ, ಸಂಸದರು ಮತ್ತು ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಕುಟುವಾದ ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ.
ಬೇಜವಾಬ್ದಾರಿ ರಾಜಕಾರಣಿಗಳು ಎಂದು ಆಕ್ರೋಶ ಹೊರ ಹಾಕಿರುವ ಕಿರಣ್ ಮಜುಂದಾರ್ ಶಾ, ಹುಸ್ಕೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಉತ್ತಮ ರಸ್ತೆ ಸೌಕರ್ಯ ಕಲ್ಪಿಸಿಲ್ಲ.
ಆನೇಕಲ್ ಶಾಸಕ ಮತ್ತು ಆನೇಕಲ್ ಕ್ಷೇತ್ರದ ಸಂಸದರಿಗೆ ಜವಾಬ್ದಾರಿ ಇಲ್ಲ. ಹುಸ್ಕೂರು-ಸರ್ಜಾಪುರ ರಸ್ತೆ ಪರಿಸ್ಥಿತಿ ಬಹಳ ಶೋಚನೀಯವಾಗಿದೆ ಎಂದಿದ್ದಾರೆ.ಉತ್ತಮ ರಸ್ತೆಯ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ, ಸರ್ಕಾರ ಯಾಕೆ ಬಸ್ ಡಿಪೋ ಮತ್ತು ವಸತಿ ಗೃಹಗಳನ್ನು ನಿರ್ಮಿಸಬೇಕಿತ್ತು ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
Kshetra Samachara
07/06/2022 06:27 pm