ಬೆಂಗಳೂರು: ನಗರದಲ್ಲೆಡೆ ಸುರಿದ ಭಾರಿ ಮಳೆಗೆ ಬೆಂಗಳೂರು ಮೂಕ್ಕಾಲು ಭಾಗ ಮುಳಿಗಿತ್ತು. ಹಲವಾರು ಪ್ರದೇಶಗಳಿಗೆ ಹಾನಿಯನ್ನ ಉಂಟುಮಾಡಿತ್ತು. ಸಾರ್ವಜನಿಕರು ಪರದಾಡುವ ಸ್ಥಿತಿ ಕ್ರಿಯೇಟ್ ಆಗಿತ್ತು. ಈ ಹಿನ್ನೆಲೆ ಸಿಎಂ ಮಳೆ ಪೀಡಿತ
ಸ್ಥಳಗಳಿಗೆ ಭೇಟಿ ನೀಡಿ ಜನರಿಗೆ ಆಶ್ವಾಸನೆ ಕೊಟ್ಟಿದ್ದಾರೆ.
ಆದಷ್ಟು ಡ್ರೆನೆಜ್ ಕ್ಲೀನ್ ಮಾಡಿಸಿ ನೀರು ಹೋಗುವಂತೆ ಮಾಡ್ತೇವೆ. ಕೊಳಚೆ ನೀರು ಮನೆಗೆ ನುಗ್ಗದಂತೆ ನೋಡಿಕೊಳ್ತೇವೆ. ನಮ್ಮ ಸಮಯದಲ್ಲಿ ಆದಷ್ಟು ಒಳ್ಳೊಳ್ಳೆ ಕೆಲಸಗಳಾಗಿವೆ. ಇನ್ಮುಂದೆಯು ಜನಗಳಿಗಾಗಿ ಕೆಲಸ ಮಾಡ್ತೇವೆ ಎಂದು ಸಿಟಿ ರೌಂಡ್ಸ್ ಹಾಕಿ ಬಂದ ಸಿಎಂ, ಕೃಷ್ಣದಲ್ಲಿ ಮಾಧ್ಯಮದವರೊಂದಿಗೆ ಪ್ರೆಸ್ ಮೀಟ್ ಮಾಡಿ ಮಾತನಾಡಿದ್ದಾರೆ.
ಮನೆಗೆ ಕೊಳಚೆ ನೀರು ನುಗ್ಗಿದ ಪರಿಣಾಮ ಹಾಳಾದ ಅಷ್ಟು ಮನೆಗಳಿಗೂ 25000 ಸಾವಿರ ದುಡ್ಡು ಹಾಗೂ ಒಂದು ವಾರಕ್ಕೆ ಆಗವಷ್ಟು ದಿನಸಿ ಪದಾರ್ಥಗಳನ್ನ ಕೊಡುವುದಾಗಿ ಘೋಷಿಸಿದ್ದಾರೆ.
PublicNext
19/05/2022 03:14 pm