ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೋಲ್ ಶುಲ್ಕ ವಸೂಲಿ ಖಂಡಿಸಿ ಕೆ.ಆರ್.ಎಸ್ ಪಕ್ಷ ಪ್ರತಿಭಟನೆ

ಬೆಂಗಳೂರು: ಪೀಣ್ಯ ಫ್ಲೈ ಓವರ್‌ ಕಳಪೆ ಕಾಮಗಾರಿ ಮಾಡಿರುವ ನವಯುಗ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲದ ಮೇಲೆ ಟೋಲ್ ಶುಲ್ಕ ವಸೂಲಿ ಬೇಡ. ತಕ್ಷಣ ಟೋಲ್ ಶುಲ್ಕ ವಸೂಲಿ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇನ್ನೂ ನಾಗಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಬಳಿ ಪ್ರತಿಭಟನೆ ನಡೆಸಿದ್ದು, ಗೊರಗುಂಟೆಪಾಳ್ಯದಿಂದ ನೆಲಮಂಗಲ ತುಮಕೂರು ಟೋಲ್‌ವರೆಗಿನ 19 ಕಿಮೀ ಉದ್ದದ ಹೈವೇ ಎಕ್ಸ್ ಪ್ರೆಸ್ ಆಗಿದ್ದು, ಗೊರಗುಂಟೆಪಾಳ್ಯದಿಂದ ನಾಗಸಂದ್ರವರೆಗಿನ ಮೇಲ್ಸೇತುವೆಯಲ್ಲಿ ದೋಷ ಕಂಡು ಬಂದ ಹಿನ್ನೆಲೆ ಕಳೆದೆರಡು ತಿಂಗಳ ಕಾಲ ಮೇಲ್ಸೇತುವೆ ಮೇಲೆ ಸಂಚಾರ ಸ್ಥಗಿತಗೊಂಡಿತ್ತು. ತಜ್ಞರ ಸೂಚನೆಯಂತೆ ಭಾರೀ ವಾಹನಗಳನ್ನು ಹೊರತುಪಡಿಸಿ ಸದ್ಯ ಲಘು ವಾಹನಗಳಿಗೆ ಸಂಚಾರ ಮುಕ್ತವಾಗಿದೆ. ಆದ್ರೆ, ಭಾರಿ ವಾಹನಗಳಿಗೆ ಮೇಲ್ಸೇತುವೆ ಮೇಲೆ ಸಂಚಾರಕ್ಕೆ ಅವಕಾಶವಿಲ್ಲದ ಮೇಲೆ ಟೋಲ್ ಶುಲ್ಕ ವಸೂಲಿ ಸಮಂಜಸವಲ್ಲ. ಹಾಗಾಗಿ ಶುಲ್ಕ ಸಂಗ್ರಹಣೆ ನಿಲ್ಲಿಸಬೇಕು.

ಅಲ್ಲದೆ ಮೇಲ್ಸೇತುವೆ ದುರಸ್ತಿ ಹೆಸರಿನಲ್ಲಿ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡಲಾಗಿದೆ. ಕಳಪೆ ಕಾಮಗಾರಿ ಮಾಡಿದ ಕಂಪೆನಿ ವಿರುದ್ಧ ದೂರು ದಾಖಲಿಸಿ ಆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಕೆ.ಆರ್.ಎಸ್ ಪಕ್ಷದ ಪ್ರತಿಭಟನಾಕಾರರು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

18/02/2022 05:45 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ