ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ 250 ಕೋಟಿ ಕಸದ ಬಿಲ್‌ ಬಾಕಿ ಇದೆ;ಕೊಡದಿದ್ದರೆ ತ್ಯಾಜ್ಯ ವಿಲೇವಾರಿ ಸ್ಟಾಪ್ !

ಬೆಂಗಳೂರು: ಕಸದ ಬಿಲ್ ಅಂದಾಜು 250 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ನಡೆ ಖಂಡಿಸಿ ಶುಕ್ರವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ನಿಲ್ಲಿಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿದ ಗುತ್ತಿಗೆದಾರರು ಪ್ರತಿಭಟನೆ ನಡೆಸಿ, ಬಿಬಿಎಂಪಿ ಜಂಟಿ ಕ್ರಿಯಾ ವೇದಿಕೆ ರಚಿಸಿಕೊಂಡು ಪಾಲಿಕೆಯಲ್ಲಿ ಸರ್ವಾಧಿಕಾರಿ ಧೋರಣೆ, ಏಕಚಕ್ರಾಧಿಪತ್ಯ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ವಿಶೇಷ ಆಯುಕ್ತರು (ಹಣಕಾಸು) ಅವರಿಂದ ಹಣಕಾಸು ಇಲಾಖೆಯಲ್ಲಿ ನಡೆಯುತ್ತಿರುವ ಅನಾನುಕೂಲ ಮತ್ತು ತೊಂದರೆಗಳಿಂದ ಬೇಸತ್ತು ಶಾಂತಿಯುತ ಧರಣಿ ನಡೆಸಲಾಗಿದೆ‌ ಎಂದು ಪ್ರತಿಭಟನಾಕಾರರು ಹೇಳಿದರು.

ಇಂದಿನಿಂದ ಬೆಂಗಳೂರಿನಲ್ಲಿ ಕಸ ಎತ್ತಲು ಗುತ್ತಿಗೆದಾರರು ಮುಂದಾಗುದಿಲ್ಲ‌. ಕಳೆದ ಆರು ತಿಂಗಳಿಂದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡಿಲ್ಲ. ಪ್ರಮುಖವಾಗಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಅವರು ಈ ಕ್ರಮ ತೆಗೆದುಕೊಂಡಿಲ್ಲ‌. ಬಾಕಿ ಬಿಲ್ ಪಾವತಿ ಆಗುವ ವರೆಗೆ ನಗರದಲ್ಲಿ ಕಸ ವಿಲೇವಾರಿ ಮಾಡಲ್ಲ ಎಂದು ಗುತ್ತಿಗೆದಾರರು ಪಟ್ಟು ಹಿಡಿದರು.

ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಎನ್.ಬಾಲಸುಬ್ರಮಣ್ಯಿ ಮಾತನಾಡಿ, ಕಸದ ಬಿಲ್ ಅಂದಾಜು 250 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ‌‌. ತೋಟಗಾರಿಕೆ, ಹೊರಗುತ್ತಿಗೆ ನೌಕರರಿಗೆ ಮತ್ತು ಸಾಮಾಜಿಕ ಸೇವಾ ಸಂಘಟನೆಗಳಿಗೆ ಅನುದಾನ ಬಿಡುಗಡೆ ಆದ ಕಾರಣ ಪ್ರತಿಭಟನೆ ಮೂಲಕ ನ್ಯಾಯ ಸಮ್ಮತ ಬೇಡಿಕೆಗೆ ಆಗ್ರಹಿಸಲಾಗಿದೆ ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ವಚ್ಛತಾ ಮತ್ತು ಗುತ್ತಿಗೆದಾರರು ಹಾಗೂ ಲಾರಿ ಮಾಲೀಕರ ಸಂಘ, ಪ್ರಜಾ ವಿಮೋಚನಾ ಸಮಿತಿ ಬಿಬಿಎಂಪಿ, ಅರಣ್ಯ ವಿಭಾಗದ ಗುತ್ತಿಗೆದಾರರುಗಳ ಸಂಘ, ಬಿಬಿಎಂಪಿ, ಡಿಇಓ ಮತ್ತು ಐಟಿ ನೌಕರರುಗಳ ಸಂಘ, ಬಿಬಿಎಂಪಿ ತೋಟಗಾರಿಕೆ ಇಲಾಖೆಯ ಗುತ್ತಿಗೆದಾರರ ಸಂಘ, ವಿಶೇಷ ಚೇತನರ ಸಂಘ ಸೇರಿದಂತೆ ಪ್ರಮುಖರು ನಮ್ಮ ಜೊತೆಗಿದ್ದಾರೆ ಎಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

18/02/2022 05:32 pm

Cinque Terre

1.71 K

Cinque Terre

0

ಸಂಬಂಧಿತ ಸುದ್ದಿ