ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ನಗರೋತ್ಥಾನ' ಅನುದಾನ ಬಾಚಿದ ಕೆ.ಆರ್. ಪುರಂ: ತಾರತಮ್ಯಕ್ಕೆ ಆಕ್ರೋಶ

ಪಬ್ಲಿಕ್ ನೆಕ್ಸ್ಟ್ ಎಕ್ಸ್‌ಕ್ಲೂಸಿವ್: ಗಣೇಶ್ ಹೆಗಡೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂಪರ್ ಕೊಡುಗೆ ನೀಡಿದ್ದಾರೆ. ಬೆಂಗಳೂರು ಹೊರತು ಪಡಿಸಿ ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಬಸವರಾಜ್ ಪ್ರತಿನಿಧಿಸುವ ಕೆ.ಆರ್.ಪುರಂಗೆ ಬೊಮ್ಮಾಯಿ ಅವರು ನಗರೋತ್ಥಾನ ಯೋಜನೆಯಡಿ 150 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ.

ಕೇವಲ ಬೈರತಿ ಅವರ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿ ಬೇರೆ ಕ್ಷೇತ್ರಗಳನ್ನು ಕಡೆಗಣಿಸಿರುವುದು ಬಿಜೆಪಿ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ದಾಖಲೆಗಳು 'ಪಬ್ಲಿಕ್ ನೆಕ್ಸ್ಟ್'ಗೆ ದೊರೆತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸರಕಾರದಿಂದ ನೀಡುವ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳ ಅಂದಾಜು ಪಟ್ಟಿಗೆ ಹಾಗೂ ಟೆಂಡರ್ ಕರೆಯಲು ಅನುಮೋದನೆ ನೀಡುವ ಬಗ್ಗೆ ಅಧಿಕಾರಯುಕ್ತ ಸಮಿತಿ ಕಳೆದ ಅ.8 ರಂದು ಸಭೆ ನಡೆಸಿ ಸಭೆಯಲ್ಲಿ ಕೈಗೊಂಡ ಕಾಮಗಾರಿಗಳಿಗಾಗಿ ಸರಕಾರದ ಅನುಮೋದನೆಗೆ ರವಾನಿಸಲಾಗಿತ್ತು.

ನಗರೋತ್ಥಾನ ಯೋಜನೆ ಅನುದಾನ ಬಿಡುಗಡೆ ಕುರಿತಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇವಲ ಕೆ.ಆರ್.ಪುರಂಗೆ ಮಾತ್ರ ಸಂಬಂಧಿಸಿದ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಮಗಾರಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 6ರಿಂದ 22ರ ವರೆಗಿನ ಕೆ.ಆರ್.ಪುರಂ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿದ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹಿದಾಯುತ್ತುಲ್ಲ ಹೊರಡಿಸಿರುವ ಆದೇಶದ ಪ್ರತಿ ಲಭ್ಯವಾಗಿದೆ.

ಅಧಿಕಾರಯುಕ್ತ ಸಮಿತಿ ಸಲಹೆ ಮಾಡಿದ್ದ ಕಾಮಗಾರಿ ಮೊತ್ತಕ್ಕಿಂತ ಶೇ.1ರಷ್ಟು ಹಣ ಹೆಚ್ಚಳ ಮಾಡಿ ಅನುದಾನ ಬಿಡುಗಡೆ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಸರಕಾರದ ಈ ನಿರ್ಧಾರ ಆಡಳಿತಾರೂಢ ಪಕ್ಷದ ಶಾಸಕರಲ್ಲದೆ, ಪ್ರತಿಪಕ್ಷ ಶಾಸಕರ ಆಕ್ರೋಶಕ್ಕೂ ಕಾರಣವಾಗಿದೆ.

Edited By : Nagaraj Tulugeri
Kshetra Samachara

Kshetra Samachara

18/11/2021 06:34 pm

Cinque Terre

318

Cinque Terre

0

ಸಂಬಂಧಿತ ಸುದ್ದಿ