ಮಹದೇವಪುರ: ಸ್ವಾತಿ ಮಹಿಳಾ ಸಂಘ ಮತ್ತು ಸ್ವಾತಿಜ್ಯೋತಿ ಮಹಿಳಾ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂಘದ ಸರ್ವ ಸದಸ್ಯರಿಗೆ ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ನ ಇಮ್ಮಡಹಳ್ಳಿ ಕಲ್ಯಾಣ ಮಂಟಪದಲ್ಲಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿನಲ್ಲೂರಹಳ್ಳಿ ನಾಗೇಶ್ ಅವರು ಸೀರೆ ಮತ್ತು ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಸಹಕಾರಿ ಸಂಘಗಳು ಮಹಿಳೆಯರಿಗೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಹಕಾರಿಸಲಾಗುತ್ತದೆ ಎಂದು ತಿಳಿಸಿದರು. ಸುಮಾರು ಎರಡು ಸಾವಿರ ಮಹಿಳೆಯರಿಗೆ ಸೀರೆ ಹಾಗೂ ಪೌಷ್ಟಿಕ ಆಹಾರ ಕಿಟ್ ವಿತರಿಸಿದರು.. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್,ಮುಖಂಡರಾದ ಜಯರಾಮ್ ರೆಡ್ಡಿ, ಬಾಬುಗೌಡ, ಸಲ್ಮಾತಾಜ್, ವನಜಾರೆಡ್ಡಿ, ಕವಿತರೆಡ್ಡಿ, ಚಂದ್ರಶೇಖರ್, ಗೋವಿಂದ ರಾಜ್, ಶಿಲ್ಪ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/08/2022 08:22 pm