ದೊಡ್ಡಬಳ್ಳಾಪುರ: ನಗರದ ಒಳಚರಂಡಿ ನೀರು ಅರ್ಕಾವತಿ ನದಿ ಪಾತ್ರದ ಚಿಕ್ಕತುಮಕೂರು ಕೆರೆಯ ಒಡಲು ಸೇರಿ ಕೆರೆ ನೀರು ವಿಷವಾಗಿದೆ.ಇದರ ವಿರುದ್ಧ ನಡೆಸಿದ ಹೋರಾಟದ ಫಲದಿಂದ ಮೈಸೂರಿನ ಕಾರಂಜಿ ಕೆರೆಯಂತೆ ಅಭಿವೃದ್ಧಿ ಮಾಡುವ ಕ್ರಿಯಾ ಯೋಜನೆಗೆ ಸಿದ್ಧತೆ ನಡೆಯುತ್ತಿದೆ.
ನಗರದ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಚಿಕ್ಕತುಮಕೂರು ಕೆರೆಯನ್ನ ಸೇರುತ್ತಿದೆ. ಕೆರೆಯ ನೀರಿನಲ್ಲಿ ಅಪಾಯಕಾರಿ ಪ್ಲೋರೆಡ್ ಅಂಶ ಪತ್ತೆಯಾಗಿದೆ. ಇದರಿಂದ ಕೆರೆಯ ರಕ್ಷಣೆಗಾಗಿಯೇ ಗ್ರಾಮಸ್ಥರು ಹೋರಾಟಕ್ಕೆ ಇಳಿದಿದ್ದಾರೆ. ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು ಕೆರೆಯನ್ನ ಮೈಸೂರಿನ ಕಾರಂಜಿ ಕೆರೆಯ ರೀತಿ ಅಭಿವೃದ್ಧಿ ಪಡಿಸುವ ತಿರ್ಮಾನಕ್ಕೆ ಬರಲಾಗಿದೆ.
ರಾಜ್ಯ ಒಳಚರಂಡಿ ನೀರು ಸರಬರಾಜು ತಜ್ಞ ಮಧುಸೂದನ್ ಚಿಕ್ಕತುಮಕೂರು ಕೆರೆಯ ಅಂಗಳದಲ್ಲಿರುವ ದೊಡ್ಡಬಳ್ಳಾಪುರ ನಗರಸಭೆಯ STP ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಧುನಿಕ ತಂತ್ರಜ್ಞಾನ ಬಳಸಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಬಿಡಲು ಕ್ರಿಯಾ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
PublicNext
19/02/2022 07:57 am