ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಧರೆಗುರುಳಿದ ವಾಜಪೇಯಿ ಕ್ರೀಡಾಂಗಣ ಗ್ಯಾಲರಿ!; ಅನಾವರಣಗೊಂಡ ಕಳಪೆ ಕಾಮಗಾರಿ

ಬೆಂಗಳೂರು: ಮಾರ್ಚ್ 1ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಿದ್ದರು. ಇಂದು ಸಂಜೆ ಬೀಸಿದ ಬಿರುಗಾಳಿ- ಭಾರಿ ಮಳೆಗೆ ಕ್ರೀಡಾಂಗಣದ ಗ್ಯಾಲರಿ ಧರೆಗುರುಳಿದೆ!

ಒಂದು ಗ್ಯಾಲರಿ ಮರಗಳ ಮಧ್ಯೆ ಸಿಲುಕಿದ್ದರೆ ಮತ್ತೊಂದು ಗ್ಯಾಲರಿ ಸೀದಾ ನೆಲಕ್ಕಪ್ಪಳಿಸಿದೆ.

4 ಕೋಟಿ ರೂ.ನಲ್ಲಿ ಬಿಬಿಎಂಪಿ ವತಿಯಿಂದ ಈ ವಾಜಪೇಯಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿತ್ತು. ಟೋಟಲಿ

50 ಕೋಟಿ ರೂ. ವೆಚ್ಚದಲ್ಲಿಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ನಿರ್ಮಾಣ ಆಗುತ್ತಿದ್ದು, ಇದೀಗ ಮಳೆ- ಗಾಳಿ ಪ್ರಹಾರಕ್ಕೆ ಕೋಟ್ಯಂತರ ರೂ. ಕಾಮಗಾರಿ ನೀರುಪಾಲಾಗಿದೆ.

ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೂ ಕಬ್ಬಿಣದ ಸರಳುಗಳು ಅಪ್ಪಳಿಸಿದ್ದು, ಗ್ರಾನೈಟ್ ಸಮೇತ ಸ್ಲ್ಯಾಬ್ ಗಳು ಕಿತ್ತು ಹೋಗಿದೆ! ಹಲವು ಮರಗಳು ಇದ್ದಿದ್ದರೆ ಇನ್ನೂ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು. ಅಲ್ಲೇ ಕೂತಿದ್ದ ಹದ್ದಿನ ಮೇಲೊಂದು ಕೊಂಬೆ ಬಿದ್ದು ಹದ್ದು ಗಾಯಗೊಂಡಿದೆ. ಒಟ್ಟಾರೆ ಕಳಪೆ ಕಾಮಗಾರಿಯಿಂದಾಗಿ ಎರಡೇ ತಿಂಗಳಲ್ಲಿ 4 ಕೋಟಿ ರೂ.ಗಳ ಕಾಮಗಾರಿ ಕೆಲಸ ನೆಲಸಮ ಆಗಿರುವ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

- ಸುರೇಶ್ ಬಾಬು Public Next ಬೆಂಗಳೂರು.

Edited By : Nagesh Gaonkar
PublicNext

PublicNext

08/05/2022 11:04 pm

Cinque Terre

48.17 K

Cinque Terre

1

ಸಂಬಂಧಿತ ಸುದ್ದಿ