ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯೋಗಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ: ವೇದಿಕೆಯಲ್ಲಿ ಹಾಡಿ ಹೊಗಳಿದ ಸಿಎಂ

ನೆಲಮಂಗಲ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರ ಮತ್ತು ಯೋಗ ವಿಜ್ಞಾನ ಕೇಂದ್ರವನ್ನು ಇಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಲೋಕಾರ್ಪಣೆ ಮಾಡಿದರು. ಶ್ರೀ ಆದಿಚುಂಚನಗಿರಿ ಕ್ಷೇತ್ರದ ಸಂಸ್ಥಾನದ ಡಾ.ನಿರ್ಮಲಾನಂದ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಿಎಂ ಬೊಮ್ಮಾಯಿ, ಡಾ ವೀರೇಂದ್ರ ಹೆಗ್ಡೆ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದೊಂದು ಅದ್ಭುತವಾದ ಕಲ್ಪನೆ. ಸಹಜ ರೀತಿಯಲ್ಲಿ ಆತ್ಮ ಮತ್ತು ದೇಹ ಶುದ್ಧೀಕರಣ ಬಹಳ ಮುಖ್ಯ. ಈ ಕಾರ್ಯಕ್ಕೆ ಶ್ರೀಕ್ಷೇತ್ರ ಮಂಜುನಾಥನ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರ ಸಜ್ಜಾಗಿದೆ. ಯೋಗಿ ಆದಿತ್ಯನಾಥ್ ಜೀ ಸಮಾರಂಭಕ್ಕೆ ಬಂದಿರೋದು ಹೆಮ್ಮ ತಂದಿದೆ. ಅವರಿಗೂ ನಮ್ಮ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಯೋಗಿಜೀ ಮೂಲತಃ ಗುರುಗಳು, ಆಸ್ಥಾನಕ್ಕೆ ಉತ್ತಮ ಗೌರವವಿದೆ. ಮೂರು ದಶಕಗಳ ಕಾಲ ಸಾಮಾಜಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಅವರ ನಡೆನುಡೆ, ದಕ್ಷ ಆಡಳಿತ ಅತ್ಯುತ್ತಮವಾಗಿದೆ. ಅವರ ಆಳ್ವಿಕೆಯಲ್ಲಿ ದುಷ್ಟರಿಗೆ ಉಳಿಗಾಲವಿಲ್ಲ. ಎಲ್ಲಾ ಸಮುದಾಯಗಳ ವಿಶ್ವಾಸವನ್ನ ಮಾಡುವ ಆಡಳಿತವನ್ನು ತಂದಿದ್ದು, ಒಂದು ಇತಿಹಾಸವನ್ನೆ ಬರೆದಿದ್ದಾರೆ ಎಂದು ಭಾಷಣದುದ್ದಕ್ಕೂ ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನ ಹಾಡಿ ಹೊಗಳಿದರು.

ಸುಮಿತ್ರ, ಪಬ್ಲಿಕ್ ನೆಕ್ಸ್ಟ್, ನೆಲಮಂಗಲ

Edited By :
PublicNext

PublicNext

02/09/2022 12:02 pm

Cinque Terre

23.95 K

Cinque Terre

1

ಸಂಬಂಧಿತ ಸುದ್ದಿ