ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ವಿಘ್ನೇಶ್ವರ ನಗರದಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ವಿಘ್ನೇಶ್ವರ ನಗರದ ಹಲವು ರಸ್ತೆಗಳಿಗೆ ಡಾಂಬರೀಕರಣ ಮಾಡಲು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಈಗಾಗಲೇ ಕ್ಷೇತ್ರದ ವ್ಯಾಪ್ತಿಯ ಐದು ಬಿಬಿಎಂಪಿ ವಾರ್ಡ್‌ಗಳ ಪೈಕಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಈ ಭಾಗದಲ್ಲಿ ಹಲವಾರು ಕೈಗಾರಿಕೆಗಳಿವೆ ಹಳ್ಳ- ದಿಣ್ಣೆ ಇರುವ ಈ ರಸ್ತೆಯಲ್ಲಿ ಓಡಾಡಲು ಆಗದೇ ಸಾರ್ವಜನಿಕರು ಸಂಕಟಕ್ಕೆ ಸಿಲುಕಿದ್ರು. ಈ ಹಿನ್ನಲೆ ಈಗ ಯಾವುದೇ ಗುಂಡಿಗಳ ಭಯವಿಲ್ಲದೆ ಓಡಾಡುವ ಮನಸ್ಥಿತಿ ಕ್ರಿಯೇಟ್ ಆಗಿದೆ ಎಂದರು.
ಇದೇ ಸಮಯದಲ್ಲಿ ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯ ಬಿಲೇಕಲ್ಲು ನಾಗರೀಕರಿಗೆ ಎ ಖಾತೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯ ರಾಜಣ್ಣ ಕಾಚೋಹಳ್ಳಿ ಲೋಕೇಶ್ ರಘುನಂದನ್ ರಘು, ವಾರ್ಡ್ ಅಧ್ಯಕ್ಷ ಮಹಿಳಾ ಮುಖಂಡರಾದ ಹೇಮಾ ಸವಿತಾ ನಾಗವೇಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ರಂಜಿತಾಸುನಿಲ್
Kshetra Samachara
29/06/2022 07:16 pm