ಬೆಂಗಳೂರು: ಪ್ರಧಾನಿ ಮೋದಿ ಬರ್ತಾರೆ ಎಂದು ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತು ಬಂದ ಪ್ರಕರಣದ ಕುರಿತು ರಾಜ್ಯ ಸರ್ಕಾರಕ್ಕೆ ಹಾಗೂ ಪಿಎಂ ಕಚೇರಿಗೆ ಬಿಬಿಎಂಪಿ ವರದಿ ನೀಡಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಮೂಲಕ ಪಿಎಂಓ ಕಚೇರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವರದಿ ಸಲ್ಲಿಸಿದ್ದಾರೆ. ನಾಲ್ಕು ಪುಟದ ವರದಿ ಗಮನಿಸಿದ ರಾಜ್ಯ ಸರ್ಕಾರವೇ ಶಾಕ್ ಆಗಿದೆ. ಪ್ರಧಾನಿಯವರು ಸಂಚರಿಸಿದ ರಸ್ತೆಯಲ್ಲಿ ಗುಂಡಿ ಬಿದ್ದಿಲ್ಲ. ಸಮೀಪದ ರಸ್ತೆ ಗುಂಡಿ ಬಿದ್ದಿದೆ. ಕೆಲವೆಡೆ ಕಳಪೆ ಕಾಮಗಾರಿ ಕೈಗೊಂಡ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
PublicNext
27/06/2022 12:05 pm